ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗದ್ದಲದ ನಡುವೆ ಮೇಲ್ಮನೆ ಉಪಸಭಾಪತಿ ಪುಟ್ಟಣ್ಣಗೆ ಕೊಕ್ (JDS | Congress | Shankar murthy | Vidhana parishath | Bangalore)
Bookmark and Share Feedback Print
 
ವಿರೋಧ ಪಕ್ಷಗಳ ಗದ್ದಲ, ಪ್ರತಿಭಟನೆ ನಡುವೆಯೇ ಗುರುವಾರ ವಿಧಾನಪರಿಷತ್ ಉಪಸಭಾಪತಿ ಪುಟ್ಟಣ್ಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.

ಸದನ ಒಮ್ಮೆ ಮುಂದೂಡಿ ನಂತರ ಆರಂಭಗೊಂಡಾಗ ಪರಿಷತ್ ಸದಸ್ಯ ದೊಡ್ಡರಂಗೇಗೌಡ ಅವರು ಉಪ ಸಭಾಪತಿ ಪುಟ್ಟಣ್ಣ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ನಿರ್ಣಯವನ್ನು ಮತಕ್ಕೆ ಹಾಕಿದಾಗ, ಪುಟ್ಟಣ್ಣ ಅವಿಶ್ವಾಸದ ಪರ 28 ಮತಗಳು ಚಲಾಯಿಸಲ್ಪಟ್ಟಿತ್ತು. ಈ ನಿರ್ಣಯದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಸರಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯದ ಇತಿಹಾಸದಲ್ಲೇ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದೀರಿ ಎಂದು ಧ್ವನಿ ಏರಿಸಿ ವಾಗ್ದಾಳಿ ನಡೆಸಿದರು.

ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಸಭಾಧ್ಯಕ್ಷ ಶಂಕರಮೂರ್ತಿ, ಅವಿಶ್ವಾಸದ ಪರ ಇರುವವರು ಎದ್ದು ನಿಲ್ಲಿ ಎಂದು ಸದಸ್ಯರಿಗೆ ಮನವಿ ಮಾಡಿದರು. ಸದಸ್ಯರ ಹೆಸರನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಬದಲಾಗಿ ತಲೆಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದರು.

ಹಿರಿಯ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದರು ಉಪಸಭಾಪತಿ ಪುಟ್ಟಣ್ಣ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವಾಗ ಜೆಡಿಎಸ್ ಸದಸ್ಯರು ಸದನದಲ್ಲಿ ಹಾಜರಿರಲಿಲ್ಲ. ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ