ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ಪೀಕರ್ ಸರಕಾರದ ಕೈಗೊಂಬೆ: ದೇವೇಗೌಡ ಟೀಕೆ (Devegowda | Karnataka | Speaker | State Politics)
Bookmark and Share Feedback Print
 
ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಬಿಜೆಪಿ ಸರಕಾರ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ, ಸ್ಪೀಕರ್ ಬೋಪಯ್ಯ ಆಡಳಿತ ಪಕ್ಷದವರಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಮುಖ್ಯಮಂತ್ರಿಯ ಆಜ್ಞೆಯಂತೆ ನಡೆದುಕೊಳ್ಳುತ್ತಿದ್ದಾರೆ. ಸದನ ಸಮಿತಿ ರಚಿಸುವಾಗ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಏಕಪಕ್ಷೀಯವಾಗಿ ನಡೆಯುವಾಗ ಎಲ್ಲವೂ ಸುಸೂತ್ರವಾಗಿ ನಡೆಯುವುದಾದರೂ ಹೇಗೆ ಎಂದು ಕಿಡಿ ಕಾರಿದರು.

ರಾಜ್ಯ ವಿಧಾನಸಭೆಯು ಅತ್ಯಂತ ಹೆಚ್ಚು ಘನತೆ ಹಾಗೂ ಗೌರವವನ್ನು ಹೊಂದಿದೆ. ಆದರೆ ಶಾಸಕರನ್ನು ಅಮಾನತು ಮಾಡುವಂತಹ ಏಕಪಕ್ಷೀಯವಾದ ಸ್ಪೀಕರ್ ಬೋಪ್ಪಯ್ಯ ಅವರ ವರ್ತನೆ ಬೇಸರ ತರಿಸಿದೆ ಎಂದರು.

ನನ್ನ ಜೀವನದಲ್ಲಿ ಇಷ್ಟು ಕೆಟ್ಟ ಸರಕಾರವನ್ನು ಕಂಡಿರಲಿಲ್ಲ. ಈ ಬಾರಿಯ ಸದನ ದಾರಿ ತಪ್ಪಿರುವ ಬಗ್ಗೆ ಅತೀವ ಬೇಸರವಿದೆ. ಹಾಗೆಯೇ ವಿಧಾನಮಂಡಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವುದು ಉತ್ತಮ ವಿಚಾರ ಎಂದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ