ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಧಿವೇಶನದ ಕಲಾಪ ವ್ಯರ್ಥಕ್ಕೆ ಸರಕಾರವೇ ಹೊಣೆ: ವಿಶ್ವನಾಥ್ (Vishwanath | BJP | Congress | JDS | Kumaraswamy | Yeddyurappa)
Bookmark and Share Feedback Print
 
ವಿಧಾನಮಂಡಲ ಅಧಿವೇಶನದ ಕಲಾಪ ವ್ಯರ್ಥವಾಗುವುದಕ್ಕೆ ಸರಕಾರವೇ ನೇರ ಹೊಣೆಯಾಗಿದ್ದು, ಅಂತಿಮವಾಗಿ ಜನತೆ ಆಶೋತ್ತರಗಳು ಬಲಿಯಾಗಿವೆ ಎಂದು ಸಂಸದ ಎಚ್.ವಿಶ್ವನಾಥ ಆರೋಪಿಸಿದ್ದಾರೆ.

ಮಾಜಿ ಶಾಸಕ ಎನ್.ಎಸ್.ಬೋಸರಾಜು ಅವರ ಸ್ಥಳೀಯ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಭ್ರಷ್ಟಾಚಾರ ಹಗರಣಗಳ ತನಿಖೆ ಸಿಬಿಐಗೆ ಒಪ್ಪಿಸಲು ಸಿದ್ಧವಿಲ್ಲ, ಚರ್ಚೆಗೂ ಅವಕಾಶ ಕೊಡುತ್ತಿಲ್ಲ. ಕೇಂದ್ರದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಸತ್ತಿನಲ್ಲಿ ನಡೆದುಕೊಂಡ ರೀತಿಗೆ ಪ್ರತೀಕಾರವಾಗಿ ರಾಜ್ಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ತಿರುಗೇಟು ನೀಡುವ ಧೋರಣೆ ತಳೆದಿಲ್ಲ. ಭ್ರಷ್ಟಾಚಾರ, ಹಗರಣಗಳು ಹೊರಬಿದ್ದಾಗ ಕೇಂದ್ರ ಕ್ರಮಕೈಗೊಂಡಿದ್ದು, ರಾಜ್ಯದ ಬಿಜೆಪಿ ಸರಕಾರ ತಟಸ್ಥ ನಿಲುವು ತಳೆದಿದೆ ಎಂದು ದೂರಿದರು.

ಸರಕಾರಕ್ಕೆ ದೂರದರ್ಶಿತ್ವದ ವಿವೇಚನಾಶಕ್ತಿಯಿಲ್ಲ. ವಿಧಾನಸಭಾಧ್ಯಕ್ಷ ಶಾಸಕಾಂಗ ಇತಿಹಾಸದಲ್ಲಿ ಕಂಡರಿಯದ ಅಪಚಾರ ಎಸಗಿದರು. ಈ ಕಾರಣಕ್ಕೆ ಯೋಗ್ಯತೆ ಇಲ್ಲದ ಸರಕಾರ, ಅವಿವೇಕಿ ಸಭಾಧ್ಯಕ್ಷರೆಂದು ಟೀಕಿಸಬೇಕಾಯಿತು.

ಸರಕಾರ ಹಾಗೂ ಸಭಾಧ್ಯಕ್ಷರ ಬಗ್ಗೆ ತಾವು ಆಡಿದ ಮಾತಿಗೆ ಈಗಲೂ ಬದ್ಧರಾಗಿದ್ದು, ಸದನಕ್ಕೆ ಚ್ಯುತಿ ತರುವಂತಹ ಪದಗಳಲ್ಲ. ಆದರೆ, ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿದವರು ಯಾವ ರೀತಿ ಅರ್ಥೈಸಿಕೊಂಡರೋ ಅವರೇ ಸ್ಪಷ್ಟಪಡಿಸಬೇಕು ಎಂದರು.

ಜೆಡಿಎಸ್ ಸಂಸದ ಎಚ್.ಡಿ.ಕುಮಾರಸ್ವಾಮಿ ವಿರುದ್ಧವೂ ವಾಗ್ದಂಡನೆ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ನನ್ನ ಸರದಿ ಬಂದಿದೆ. ಜನಪ್ರತಿನಿಧಿಗಳ ಮೇಲೆ ನಿರ್ಬಂಧ ಹೇರಲು ಸರಕಾರ ಹವಣಿಸಿದಂತಿದ್ದು, ಪ್ರತಿಪಕ್ಷಗಳ ಬಾಯಿ ಕಟ್ಟಿಹಾಕಲು ಈ ಅಸ್ತ್ರ ಬಳಸಿಕೊಂಡಿದೆ ಎಂದು ಕಿಡಿಕಾರಿದರು.
ಸಂಬಂಧಿತ ಮಾಹಿತಿ ಹುಡುಕಿ