ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ತಾನೇ ತೋಡಿದ ಹಳ್ಳಕ್ಕೆ ಬೀಳಲಿದೆ: ಕುಮಾರಸ್ವಾಮಿ (Kumaraswamy | JDS | BJP | Yeddyurappa | Congress)
Bookmark and Share Feedback Print
 
ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಮುಂದಿನ ನಾಲ್ಕೈದು ತಿಂಗಳಲ್ಲಿ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತೆ ಭವಿಷ್ಯ ನುಡಿದಿದ್ದಾರೆ.

ಬಿ.ಯರಹಳ್ಳಿ ಗ್ರಾಮದಲ್ಲಿ ಎಂಟು ದಿನಗಳ ಹಿಂದೆ ಕೊಲೆಯಾದ ಜೆಡಿಎಸ್ ಕಾರ್ಯಕರ್ತ ಚಿಕ್ಕಣ್ಣನ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ, ತಾನೇ ತೋಡಿದ ಹಳ್ಳಕ್ಕೆ ಬೀಳುತ್ತಿದೆ. ಯಾರೂ ಸರಕಾರವನ್ನು ಬೀಳಿಸಬೇಕಿಲ್ಲ. ಅದಾಗಿಯೇ ಬಿದ್ದು ಹೋಗಲಿದೆ. ಇದಕ್ಕಾಗಿ ಕಾದು ನೋಡಿ ಎಂದು ಹೇಳಿದರು.

ವಿಶ್ವಾಸ ಮತ ಯಾಚನೆ ವೇಳೆ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದ ಆರೋಪದ ಮೇಲೆ 15 ಶಾಸಕರ ಅಮಾನತು ಮಾಡುವ ಪ್ರಯತ್ನ ಸರಿಯಲ್ಲ ಎಂದ ಅವರು, ವಿಧಾನಸಭೆಯಲ್ಲಿ ನಡೆಯಬಾರದ್ದೇನೂ ನಡೆದಿಲ್ಲ. ವರ್ಷಗಟ್ಟಲೆ ಅಮಾನತಾಗುವ ಕೆಲಸವನ್ನೇನೂ ಶಾಸಕರು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದರು.

ವಿಧಾನಸಭಾಧ್ಯಕ್ಷ ಬೋಪಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಆದೇಶ ಪರಿಪಾಲಕರಾಗಿದ್ದಾರೆಯೇ ಹೊರತು ವೈಯಕ್ತಿಕವಾಗಿ ಯೋಚಿಸಿ ನಡೆಯುತ್ತಿಲ್ಲ ಎಂದು ಟೀಕಿಸಿದರು.

ಜಿ.ಪ., ತಾ.ಪಂ. ವರಿಷ್ಠರ ಚುನಾವಣೆಯಲ್ಲಿ ಜಾ.ದಳದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ವಿಭಿನ್ನ ನಿಲುವುಗಳಿವೆ. ಹಾಗಾಗಿ ನಾವಾಗಿಯೇ ಹೋಗಿ ಕೇಳುವುದು ಸರಿಯಲ್ಲ. ಮುಂದೇನಾಗುತ್ತದೋ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ