ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕರ್ನಾಟಕದಲ್ಲಿ ಬಿಜೆಪಿ ಸರಕಾರದಿಂದ ತುರ್ತು ಪರಿಸ್ಥಿತಿ: ಕುಮ್ಮಿ (HD Kumaraswamy | JDS | BJP | BS Yeddyurappa)
Bookmark and Share Feedback Print
 
ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಹೇರಿದ ರೀತಿಯಲ್ಲಿ ಬಿಜೆಪಿ ಸರಕಾರವು ಆಡಳಿತ ನಡೆಸುತ್ತಿದೆ. ಪ್ರತಿಪಕ್ಷಗಳ ನಾಯಕರಿಗೆ ಪೊಲೀಸರ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಇಂದಿರಾ ಗಾಂಧಿ ಕಾಲದಲ್ಲೂ ಹೀಗಿರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಮಾತನಾಡುತ್ತಿದ್ದ ಅವರು, ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷದ ಸದಸ್ಯರನ್ನು ಮುಕ್ತವಾಗಿ ಪಾಲ್ಗೊಳ್ಳಲು ಬಿಡುತ್ತಿಲ್ಲ. ಪೊಲೀಸ್ ಸರ್ಪಗಾವಲು ಹಾಕುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಹೊತ್ತಿನಲ್ಲೂ ಇಂದಿರಾ ಗಾಂಧಿಯವರು ವಿರೋಧ ಪಕ್ಷಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಿರಲಿಲ್ಲ. ಆದರೆ ಈ ಬಿಜೆಪಿ ಸರಕಾರವು ಆ ಕೆಲಸವನ್ನು ಮಾಡುತ್ತಿದೆ. ವಿಪಕ್ಷಗಳ ಸದಸ್ಯರು ಅಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರಿಂದಲೇ ದೂರು ಸ್ವೀಕರಿಸಿ, ಏಕಪಕ್ಷೀಯವಾಗಿ ಕಲಾಪ ನಡೆಯದೇ ಇದ್ದ ಹೊತ್ತಿನಲ್ಲಿ ಸದನ ಸಮಿತಿ ರಚಿಸಿ, 15 ಮಂದಿ ಶಾಸಕರನ್ನು ಅಮಾನತುಗೊಳಿಸಲು ಸಂಚು ರೂಪಿಸಲಾಗಿದೆ ಎಂದು ಕುಮಾರಸ್ವಾಮಿ ಆಪಾದಿಸಿದರು.

ಈ ರೀತಿ ಅಕ್ರಮವಾಗಿ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಮಾನತು ಮಾಡುವ ಧೈರ್ಯವನ್ನು ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಪ್ರದರ್ಶಿಸುವರೇ ಎಂದೂ ಅವರು ಪ್ರಶ್ನಿಸಿದರು.

ಸಿಬಿಐ ನೆರವು ಕೋರಿಕೆಗೆ ಟೀಕೆ...
ಭೂ ಹಗರಣಗಳ ತನಿಖೆಗಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಪದ್ಮರಾಜ್ ಆಯೋಗವು ಸಿಬಿಐ ನೆರವು ಕೋರಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಇಂತಹ ಆಯೋಗಗಳ ರಚನೆಯಿಂದ ಕಾಲಹರಣವೇ ಹೊರತು ಮತ್ತೇನೂ ಲಾಭವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಿಬಿಐ ನೆರವು ಕೋರಿರುವುದು ಯಾವ ಪ್ರಕರಣದ ಸಂಬಂಧ ಎನ್ನುವುದು ಸ್ಪಷ್ಟವಾಗಬೇಕು. ಸಿಬಿಐ ಅಧಿಕಾರಿಗಳು ಆಯೋಗದ ಗುಮಾಸ್ತರಂತೆ ಕೆಲಸ ಮಾಡಲು ಸಾಧ್ಯವಿದೆಯೇ? ಈ ಹಿಂದೆ ಎಲ್ಲಾದರೂ ಸಿಬಿಐ ಅಧಿಕಾರಿಗಳು ಆಯೋಗಗಳಿಗೆ ಸಹಕಾರ ನೀಡಿರುವ ಉದಾಹರಣೆಗಳಿವೆಯೇ ಎಂದು ಪ್ರಶ್ನಿಸಿದರು.

ಈ ರೀತಿ ಕಾಲಹರಣ ಮಾಡುವ ಬದಲು ತನಿಖೆಯನ್ನು ನೇರವಾಗಿ ಸಿಬಿಐಗೆ ಒಪ್ಪಿಸಲಿ ಎಂದು ಆಗ್ರಹಿಸಿದ ಜೆಡಿಎಸ್ ನಾಯಕ, ನ್ಯಾಯಾಂಗ ತನಿಖೆಯಲ್ಲಿ ಸಿಬಿಐ ಸಹಕಾರ ನೀಡಿ, ಸ್ವತಃ ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರ ಕಾನೂನು ಬಾಹಿರ ಕೆಲಸಗಳನ್ನು ಪತ್ತೆ ಮಾಡಿದರೆ ಬಂಧನಕ್ಕೊಳಗಾಗಲು ಸಿಎಂ ಸಿದ್ಧರೇ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ