ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಬರಿಮಲೆ; ಕರ್ನಾಟಕದ ಮುಸ್ಲಿಂ ಭಕ್ತನನ್ನೂ ಬಿಡದ ಜವರಾಯ (Mehaboobsab madki | Sabarimala | Karwar | Muslim)
Bookmark and Share Feedback Print
 
ಶಬರಿಮಲೆಯಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಕರ್ನಾಟಕದ ಮುಸ್ಲಿಂ ವ್ಯಕ್ತಿಯೊಬ್ಬರು ಕೂಡ ದುರಂತದಲ್ಲಿ ಬಲಿಯಾಗಿರುವ ಸುದ್ದಿ ಬಂದಿದೆ.

ಇವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೆಹಬೂಬ್ ಸಾಬ್ ಮಡ್ಕಿ (22) ಎಂದು ಗುರುತಿಸಲಾಗಿದೆ. ಪ್ರತಿವರ್ಷ ಅಯ್ಯಪ್ಪ ಮಾಲೆ ಧರಿಸುತ್ತಿದ್ದ ಮೆಹಬೂಬ್‌ರನ್ನು ಈ ಬಾರಿ ಜವರಾಯ ಅಪ್ಪಿಕೊಂಡು, ಕುಟುಂಬಕ್ಕೆ ದೊಡ್ಡ ಆಘಾತ ನೀಡಿದ್ದಾನೆ.
ದುರಂತದ ಒಂದು ದೃಶ್ಯ
WD

ಕಳೆದ ಐದು ವರ್ಷಗಳಿಂದ ಪ್ರತಿ ಬಾರಿಯೂ ಮೆಹಬೂಬ್ ಶಬರಿಮಲೆ ಯಾತ್ರೆ ಮಾಡುತ್ತಿದ್ದರು. ಈ ಬಾರಿ ಕಾರವಾರದ ಅಯ್ಯಪ್ಪ ಭಕ್ತವೃಂದದ ಜತೆ ಅವರು ತೆರಳಿದ್ದರು. ಅವರ ಜತೆ ಇತರ ಹಿಂದೂ ಭಕ್ತಾದಿಗಳು ಕೂಡ ಇದ್ದರು.

ಮೆಹಬೂಬ್ ಕುಟುಂಬಕ್ಕೆ ಈಗಷ್ಟೇ ಮಾಹಿತಿ ಗೊತ್ತಾಗಿದೆ. ಕಾಲ್ತುಳಿತದ ಸುದ್ದಿ ಕೇಳಿದ ತೀವ್ರ ಆತಂಕದಿಂದ ಇದ್ದ ಕುಟುಂಬಕ್ಕೆ ಮೆಹಬೂಬ್ ಸಾವನ್ನಪ್ಪಿರುವ ಸುದ್ದಿ ಬರಸಿಡಿಲಿನಂತೆ ಎರಗಿದೆ.

ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಮೆಹಬೂಬ್ ಸತ್ತಿರುವ ಸುದ್ದಿ ಮಾತ್ರ ಬಂದಿದೆ. ಶವ ಹಸ್ತಾಂತರ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ