ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನರ್ಹ ಪ್ರಕರಣ-ವರ್ತೂರು ಸಚಿವರಾಗಬಹುದೇ?; ಹೈಕೋರ್ಟ್ (High court | Varthuru Prakash | Independent MLA | BJP)
Bookmark and Share Feedback Print
 
NRB
ಐವರು ಪಕ್ಷೇತರ ಶಾಸಕರು ಸರಕಾರದ ಸಂಪುಟದಲ್ಲಿ ಸಚಿವರಾಗಿದ್ದರು. ಆ ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಬಹುದು. ಹಾಗಾದರೆ ಆರನೇ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಸರಕಾರದಲ್ಲಿ ಸಚಿವನಾದರೆ ಮುಂದೆ ಆತನ ಪರಿಸ್ಥಿತಿ ಏನು? ಎಂಬುದು ಹೈಕೋರ್ಟ್ ಪೂರ್ಣಪೀಠದ ಪ್ರಶ್ನೆ. ಮುಂದೆ ಪ್ರಕಾಶ್ ಸಚಿವರಾದರೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು ಎಂದು ವಕೀಲ ಸತ್ಯಪಾಲ್ ಜೈನ್ ಸ್ಪಷ್ಟಪಡಿಸಿದ್ದಾರೆ.

ಇದು ಅನರ್ಹತೆ ಪ್ರಶ್ನಿಸಿ ಐವರು ಪಕ್ಷೇತರ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಮೋಹನ ಶಾಂತನಗೌಡರ್, ನ್ಯಾ.ಅಬ್ದುಲ್ ನಜೀರ್ ಮತ್ತು ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಪೂರ್ಣ ಪೀಠದ ಮುಂದೆ ಬಿಜೆಪಿ ಮುಖ್ಯ ಸಚೇತಕ ಡಿ.ಎನ್.ಜೀವರಾಜ್ ಪರ ಹಿರಿಯ ವಕೀಲ ಸತ್ಯಪಾಲ್ ಜೈನ್ ಅವರ ಹೇಳಿಕೆ.

ಸ್ಪೀಕರ್ ಕ್ರಮವನ್ನು ಸಮರ್ಥಿಸಿಕೊಂಡು ವಾದ ಮಂಡಿಸುತ್ತಿದ್ದಾಗ, ನ್ಯಾಯಾಧೀಶರು ವರ್ತೂರು ಪ್ರಕಾಶ್ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರ ನೀಡಿದ ಜೈನ್, ಒಂದು ವೇಳೆ ವರ್ತೂರು ಪ್ರಸ್ತುತ ಸರಕಾರದಲ್ಲಿ ಸಚಿವರಾದರೆ ತಮ್ಮ ಪಕ್ಷೇತರ ಸ್ಥಾನಮಾನ ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಬೋಪಯ್ಯ ಅವರಿಗೆ ಇದೆ ಎಂದು ಹೇಳಿದರು. ಈ ಹೇಳಿಕೆಯನ್ನು ದಾಖಲಿಸಿಕೊಳ್ಳಬಹುದೇ ಎಂದು ನ್ಯಾಯಪೀಠ ಹೇಳಿದಾಗ ಅದಕ್ಕೆ ಜೈನ್ ಸಮ್ಮತಿಸಿದರು.

ಇನ್ನು ಪಕ್ಷೇತರರ ಅರ್ಜಿಗೆ ಸಂಬಂಧಿಸಿದಂತೆ ನಡೆದ ವಾದದಲ್ಲಿ, ಈ ಸರಕಾರ ಅಸ್ತಿತ್ವಕ್ಕೆ ಬಂದ ದಿನವೇ ಐವರು ಪಕ್ಷೇತರ ಶಾಸಕರು ಸರಕಾರದ ಭಾಗವಾಗಿ ಸಚಿವ ಪದವಿ ಅಲಂಕರಿಸಿದ್ದಾರೆ. ಹೀಗಿರುವಾಗ ಅವರನ್ನು ಸಹ ಸದಸ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಮೇಲಾಗಿ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಪಕ್ಷದ ರಿಜಿಸ್ಟರ್‌ಗಳಿಗೆ ಸಹಿ ಮಾಡಿದ್ದಾರೆ. ಇವೆಲ್ಲವೂ ಅವರು ಬಿಜೆಪಿ ಭಾಗವಾಗಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದರು.

ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಲು ಪಕ್ಷಾಂತರ ನಿಷೇಧ ಕಾಯ್ದೆಯಡಿ ನಿಯಮಾವಳಿಗಳಿಲ್ಲ ಎಂಬುದು ಅರ್ಜಿದಾರರ ವಾದ. ನಿಯಮಾವಳಿಗಳು ಇಲ್ಲದ ಸಂದರ್ಭದಲ್ಲಿ ಸಂವಿಧಾನಾತ್ಮಕವಾಗಿ ಕೆಲಸ ಮಾಡಲು ಸ್ಪೀಕರ್ ಅವರಿಗೆ ಅಧಿಕಾರ ಇದೆ. ಈ ಅಧಿಕಾರ ಚಲಾಯಿಸಿ ಅವರು ಬಿಜೆಪಿ ಜತೆ ಇದ್ದ ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದಾರೆ ಎಂದು ಜೈನ್ ವಾದಿಸಿದರು.

ಪಕ್ಷೇತರರು ಒಂದು ಪಕ್ಷದ ಸರಕಾರಕ್ಕೆ ಬೆಂಬಲ ನೀಡಿ ಆ ಸರಕಾರದಲ್ಲಿ ಸಚಿವರಾದ ಮೇಲೆ ತಮ್ಮ ಪಕ್ಷೇತರ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂಬ ವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ಬಯಸಿದ ಪೂರ್ಣಪೀಠ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿದೆ.
ಸಂಬಂಧಿತ ಮಾಹಿತಿ ಹುಡುಕಿ