ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಹುತ್ವದ ಮಧ್ಯೆ ಏಕತೆ ಒಪ್ಪಿಕೊಂಡ ರಾಷ್ಟ್ರ ಭಾರತ: ಮರುಳಸಿದ್ದಪ್ಪ (Marula siddappa | India | Karnataka | Tagore | Heggodu)
Bookmark and Share Feedback Print
 
ಬಹುತ್ವದ ಮಧ್ಯೆ ಏಕತೆಯನ್ನು ಒಪ್ಪಿಕೊಂಡ ರಾಷ್ಟ್ರ ಭಾರತ ಎಂದು ಸಾಹಿತಿ ಡಾ. ಕೆ.ಮರುಳಸಿದ್ದಪ್ಪ ಅಭಿಪ್ರಾಯವ್ಯಕ್ತಪಡಿಸಿದರು. ಅವರು ಪಟ್ಟಣದಲ್ಲಿ ಒಡನಾಟ ಸಂಸ್ಥೆ ಮತ್ತು ಹೆಗ್ಗೋಡಿನ ಚರಕ ಘಟಕ ವತಿಯಿಂದ ಏರ್ಪಡಿಸಿದ್ದ ರವೀಂದ್ರನಾಥ ಟಾಗೋರರ ಕೃತಿಗಳನ್ನಾಧರಿಸಿದ ಪ್ರಸಿದ್ಧ ಚಲನಚಿತ್ರ ಪ್ರದರ್ಶನದ ಚರಕ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.

ನಾನಾ ಸಂಸ್ಕೃತಿ, ಭಾಷೆ, ಸಮುದಾಯವನ್ನೊಳಗೊಂಡ ರಾಷ್ಟ್ರ ಇದು. ವಿವೇಕಿಗಳು ಈ ರಾಷ್ಟ್ರವನ್ನು ಬೆಂಬಲಿಸಿದರು. ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಟಾಗೋರರ ಅವಧಿ ಮಹತ್ವದ ಕಾಲ. ಆ ಸಂದರ್ಭದ ಮೂರ್ನಾಲ್ಕು ಘಟನೆಗಳು ಭಾರತದ ಸ್ವರೂಪವನ್ನು ಬದಲಿಸಿದವು ಎಂದು ವಿಶ್ಲೇಷಿಸಿದರು.

ಇಂಗ್ಲಿಷ್ ಭಾಷೆ ಈ ದೇಶದಲ್ಲಿ ಬೇರೂರಿದ್ದರಿಂದ ಜಗತ್ತಿನೊಂದಿಗಿನ ಸಂಬಂಧ ಗಾಢವಾಗಿ ಏರ್ಪಟ್ಟಿತು. 19 ನೇ ಶತಮಾನದ ದ್ವಿತೀಯಾರ್ಧದಲ್ಲಿ ಬಂಗಾಳದಲ್ಲಿ ರಾಷ್ಟ್ರ ಕಲ್ಪನೆ ಹುಟ್ಟಿತು. ಬಂಕಿಮಚಂದ್ರರು ಉಗ್ರ ರಾಷ್ಟ್ರವಾದ ಪ್ರತಿಪಾದಿಸಿದರೆ, ಟಾಗೋರ್, ವಿವೇಕಾನಂದರು ಸಾತ್ವಿಕರಾಷ್ಟ್ರವಾದ ಪ್ರತಿಪಾದಿಸಿದರು ಎಂದರು.

ಇಂದು ಅಭಿವೃದ್ಧಿ ಹೆಸರಲ್ಲಿ ಕ್ರೌರ್ಯ, ಹಿಂಸೆ ನಡೆಯುತ್ತಿದ್ದು, ಬಹಳ ಹಿಂದೆಯೇ ಟಾಗೋರರು ಇದನ್ನು ಖಂಡಿಸಿದ್ದರು. ಆಧುನಿಕ ಕಾಲದಲ್ಲಿ ತಾರತಮ್ಯ ಹಿಂಸೆಗೆ ಕಾರಣವಾಗುತ್ತದೆಂಬುದನ್ನು ಹಿಂದೆಯೇ ಕಂಡುಕೊಂಡಿದ್ದರು. ಕಳೆದ 20 ವರ್ಷದಿಂದ ಭಾರತ ಉಗ್ರ ರಾಷ್ಟ್ರವಾದಕ್ಕೆ ಮಣೆ ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ