ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯುವಜನಾಂಗ ಸ್ವಾವಲಂಬಿ ಆಗುವಂತೆ ವೃತ್ತಿಶಿಕ್ಷಣ: ಕಾಗೇರಿ (Kageri | BJP | Yeddyurappa | Karnataka | IT)
Bookmark and Share Feedback Print
 
ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಮಾಹಿತಿ, ವಿವಿಧ ಕೌಶಲ್ಯಗಳ ಕಲಿಕೆಗೆ ಅವಕಾಶ ಕಲ್ಪಿಸುವುದು ಇಂದು ಅತಿ ಅವಶ್ಯವಾಗಿದೆ. ಈ ದಿಸೆಯಲ್ಲಿ ಕೇಂದ್ರ ಸರಕಾರದ ನೆರವು ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೃತ್ತಿ ಶಿಕ್ಷಣ, ಅರ್ಹತೆಯ ಚೌಕಟ್ಟು ವಿಷಯದ ವಿಚಾರ ಸಂಕಿರಣದಲ್ಲಿ ಕಾಗೇರಿ ಪಾಲ್ಗೊಂಡು ರಾಜ್ಯದ ನಿಲುವನ್ನು ಮಂಡಿಸಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ಒಂಬತ್ತು ಮತ್ತು ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಅಧ್ಯಯನ ವಿಷಯ ಬೋಧಿಸುವುದು ಅವಶ್ಯಕ. ಪ.ಪೂ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಾನಾ ರೀತಿಯ ಕೌಶಲ್ಯ ರೂಢಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಕಾರ್ಮಿಕ ಇಲಾಖೆ, ಐಟಿಐ, ಪಾಲಿಟೆಕ್ನಿಕ್, ಪ್ರೌಢಶಿಕ್ಷಣ ಮೊದಲಾದ ವಿಭಾಗಗಳಲ್ಲಿ ವೃತ್ತಿ ಶಿಕ್ಷಣ ಇಂದು ಹರಿದುಹಂಚಿ ಹೋಗಿದ್ದು ಅವುಗಳ ಸಂಯೋಜನೆ ತುರ್ತು ಅಗತ್ಯವಾಗಿದೆ ಎಂದಿದ್ದಾರೆ.

ಇಂದಿನ ಐಟಿ ಯುಗದಲ್ಲಿ ವೃತ್ತಿ ಶಿಕ್ಷಣ ಯುವಜನಾಂಗದ ಕೌಶಲ್ಯ ವೃದ್ಧಿಸುತ್ತದೆ. ಅದಕ್ಕಾಗಿ ವಯೋಮಾನಕ್ಕೆ ಅನುಗುಣವಾಗಿ ಪ್ರತ್ಯೇಕ ಪಠ್ಯ ಮತ್ತು ಪ್ರಾಯೋಗಿಕ ವಿಚಾರ ಶಿಕ್ಷಣದಲ್ಲಿ ಅಳವಡಿಸಬೇಕು. ವೃತ್ತಿ ಶಿಕ್ಷಣದ ಜವಾಬ್ದಾರಿ ಹೊರಲು ಮುಂದೆ ಬರುವ ಖಾಸಗಿ ವಿದ್ಯಾಸಂಸ್ಥೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು. ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಪಾರಂಪರಿಕ ಕೌಶಲ್ಯಗಳು ವಿಭಿನ್ನವಾಗಿದ್ದು ಅಲ್ಲಿನ ಪರಿಸರಕ್ಕೆ ತಕ್ಕಂತೆ ಬೆಳೆಸಿ ಯುವ ಜನಾಂಗದಲ್ಲಿ ಜನಪ್ರಿಯ ಆಗುವಂತೆ ಮಾಡಬೇಕು. ಯುವಜನಾಂಗ ಸ್ವಾವಲಂಬಿ ಆಗುವಂತೆ ವೃತ್ತಿಶಿಕ್ಷಣ ಹಾಗೂ ಪ್ರತಿಭೆ ಕೌಶಲ್ಯ ಪ್ರೋತ್ಸಾಹಿಸಲು ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಅಗತ್ಯ ಸಹಾಯ ನೀಡಬೇಕು ಎಂದು ಕಾಗೇರಿ ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ