ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯಪಾಲರಿಂದ ಮುನ್ಸಿಪಾಲ್ಟಿ ರಾಜಕೀಯ: ಸಿ.ಟಿ.ರವಿ (BJP | Yeddyurappa | CT Ravi | Bharadwaj | Congress,)
Bookmark and Share Feedback Print
 
ಸರಕಾರದ ವಿರುದ್ಧ ಅನಗತ್ಯವಾಗಿ ಟೀಕೆ ಮಾಡುತ್ತಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುನ್ಸಿಪಾಲಿಟಿ ಮಟ್ಟದ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ವಕ್ತಾರ, ಶಾಸಕ ಸಿ.ಟಿ.ರವಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕಳ್ಳನೇ ಠಾಣೆಗೆ ಬಂದು ದೂರು ನೀಡಿದಂತೆ ಎಂಬುದಾಗಿ ರಾಜ್ಯಪಾಲರು ಟೀಕಿಸುತ್ತಾರೆ. ಕಳ್ಳರ ನಾಯಕ ಮೊದಲು ಯಾರು ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ರಾಜ್ಯಪಾಲರು ನಾಮಕಾವಸ್ತೆ ಮುಖ್ಯಸ್ಥರು, ಶಾಸಕರು ಚುನಾಯಿತ ಪ್ರತಿನಿಧಿಗಳು. ಕಾರ್ಯಾಂಗವೂ ಕೂಡ ಸರಕಾರದ ಅಂಗವಾಗಿಯೇ ಕೆಲಸ ನಿರ್ವಹಿಸಬೇಕಾಗುತ್ತದೆ. ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಸರಕಾರವನ್ನೇ ಕಳ್ಳರು ಎಂದು ಕರೆದರೆ, ರಾಜ್ಯಪಾಲರೇ ಕಳ್ಳರ ನಾಯಕ ಎಂದಾಗುತ್ತದೆ ಎಂದು ವ್ಯಂಗ್ಯವಾಡಿದರು.

ರಾಜ್ಯಪಾಲರು ಸರಕಾರದ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಅಲ್ಲದೇ ರಾಜ್ಯಪಾಲರ ಹುದ್ದೆಗೂ ಅವರು ಅಪಮಾನ ಮಾಡಿದ್ದಾರೆಂದು ಟೀಕಿಸಿದರು. ಅವರ ಬಗ್ಗೆ ಬಿಜೆಪಿಗೆ ಅಪಾರ ಗೌರವವಿದೆ. ಆದರೆ ಅವರ ನಡವಳಿಕೆ ಬಗ್ಗೆ ಗೌರವವಿಲ್ಲ. ಈ ರೀತಿ ರಾಜಕಾರಣ ಮಾಡುವ ಬದಲು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬರಲಿ ಎಂದು ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ