ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೇಲೆಕೇರಿ ಅದಿರು ಚೀನಾಕ್ಕೆ ಸಾಗಿಸಿದ್ದು ಶಾಸಕ ಆನಂದ್ ಸಿಂಗ್? (BJP | Anand singh | Karwar | China | Marishash)
Bookmark and Share Feedback Print
 
ಕಾರವಾರದ ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರಿನಲ್ಲಿ ಸುಮಾರು 80,160 ಮೆಟ್ರಿಕ್ ಟನ್‌ನಷ್ಟು ಹೊಸಪೇಟೆಯ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರ ಪಾಲುದಾರಿಕೆ ಹೊಂದಿದ್ದ ಕಂಪನಿ ಚೀನಾಕ್ಕೆ ಸಾಗಾಟ ಮಾಡಿರುವ ಬಗ್ಗೆ ಖಾಸಗಿ ಚಾನೆಲ್‌ವೊಂದು ವರದಿ ಮಾಡಿದೆ.

2010ರ ಮಾರ್ಚ್ 23ರಂದು ಆನಂದ್ ಸಿಂಗ್ ಅವರು ಮಾರಿಷಸ್‌ನ ಪ್ರೇಮ್ ವಿದ್ಯಾ ಎಂಬ ಹಡಗನ್ನು ಬಾಡಿಗೆ ಪಡೆದು ಅದರಲ್ಲಿ ಅದಿರನ್ನು ಚೀನಾದ ಜಿಂಗ್‌ಟಾಂಗ್ ನಗರಕ್ಕೆ ಸಾಗಿಸಲಾಗಿದೆ ಎಂದು ತಿಳಿಸಿದೆ.

ಮಾರ್ಚ್ 20ರಂದು ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆಯ ಸುಮಾರು ಐದು ಲಕ್ಷ ಮೆಟ್ರಿಕ್ ಟನ್ ಅದಿರನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆದರೆ, ಈ ಅದಿರು ರಾತ್ರೋರಾತ್ರಿ ನಾಪತ್ತೆಯಾಗಿತ್ತು. ಅದಿರು ನಾಪತ್ತೆ ಮಾಡಿದ್ದು ಯಾರೆಂಬುದು ಪತ್ತೆಯಾಗಿರಲಿಲ್ಲವಾಗಿತ್ತು.
ಪ್ರಕರಣದ ತನಿಖೆ ನಡೆಸಲು ರಾಜ್ಯ ಸರಕಾರ ಸಿಐಡಿ ಹಾಗೂ ಲೋಕಾಯುಕ್ತರನ್ನು ನೇಮಿಸಿದೆ. ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಅದಿರು ನಾಪತ್ತೆ ಅವಧಿಯಲ್ಲಿ ಆನಂದ್ ಸಿಂಗ್ ಅವರ ಐಎಲ್‌ಸಿ ಕಂಪನಿ ಚೀನಾಕ್ಕೆ ಅದಿರು ಸಾಗಿಸಿರುವ ಅಂಶ ಬಯಲಾಗಿದೆ.

ಅದಿರು ಸಾಗಿಸಲು ಬಾಡಿಗೆ ಪಡೆದಿದ್ದ ಮಾರಿಷಸ್‌ನ ಪ್ರೇಮ್ ವಿದ್ಯಾ ಹಡಗು ಅಧಿಕಾರಿಗಳ ಭರಾಟೆಯಿಂದಾಗಿ ಬೇಲೆಕೇರಿ ಬಂದರಿನಲ್ಲಿ ಸುಮಾರು ಆರು ದಿನಗಳ ಕಾಲ ಲಂಗರು ಹಾಕಿತ್ತು. ಅದರಿಂದ ತನ್ನ ಸಂಸ್ಥೆಗೆ ಸುಮಾರು 1 ಕೋಟಿಗೂ ಅಧಿಕ ಬಾಡಿಗೆ ನಷ್ಟವಾಗಿದೆ. ಆ ಬಾಡಿಗೆಯನ್ನು ಕೊಡಬೇಕೆಂದು ಮಾರಿಷಸ್‌ನ ಬ್ರಿಡ್ಜ್ ಪ್ರಾಜೆಕ್ಟ್ ಸಂಸ್ಥೆ ಲಂಡನ್ ಕೋರ್ಟ್‌ನಲ್ಲಿ ಕೇಸ್ ದಾಖಲಿಸುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.

ಇದು ಸುಳ್ಳು ಆರೋಪ-ಆನಂದ್ ಸಿಂಗ್;
ಬೇಲೆಕೇರಿ ಬಂದರಿನಿಂದ ತಮ್ಮ ಒಡೆತನದ ಸಂಸ್ಥೆ ಅದಿರನ್ನು ಚೀನಾಕ್ಕೆ ಸಾಗಿಸಿದೆ ಎಂಬ ವರದಿ ಸತ್ಯಕ್ಕೆ ದೂರವಾದದ್ದು ಎಂದು ಶಾಸಕ, ಗಣಿ ಮಾಲೀಕ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ತನಗೂ ಐಎಲ್‌ಸಿ ಸಂಸ್ಥೆಗೂ ಸಂಬಂಧವಿಲ್ಲ ಎಂದು ಸಮಜಾಯಿಷಿ ನೀಡಿದರಾದರೂ ಆನಂದ್ ಸಿಂಗ್, ನಂತರ ತಾನು ಐಎಲ್‌ಸಿ ನಿರ್ದೇಶಕ ಎಂದು ಹೇಳಿಕೆ ನೀಡಿ ತಾವೇ ಪೇಚಿಗೆ ಸಿಲುಕಿದ ಪ್ರಸಂಗ ಖಾಸಗಿ ಚಾನೆಲ್‌ಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ನಡೆಯಿತು.
ಸಂಬಂಧಿತ ಮಾಹಿತಿ ಹುಡುಕಿ