ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೇಲ್ನೋಟಕ್ಕೆ ಓಕೆ: ಸಿಎಂ ವಿರುದ್ಧ ಕ್ರಮಕ್ಕೆ ಗವರ್ನರ್ ಸಮರ್ಥನೆ (Primafacie | Yaddyurappa | Karnataka CM | HR Bharadwaj | Governor | Sanction against CM)
Bookmark and Share Feedback Print
 
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಕೇಸು ದಾಖಲಿಸಲು ಅನುಮತಿ ನೀಡಿರುವುದಕ್ಕೆ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಖಚಿತಗೊಂಡಿವೆ ಎಂದು ಸಮರ್ಥಿಸಿಕೊಂಡಿದ್ದಾರೆ.

"ಆರೋಪಗಳ ದಾಖಲೆಗಳು ಮತ್ತು ಅದಕ್ಕೆ ಪೂರಕವಾಗಿ ನೀಡಲಾದ ದಾಖಲೆಗಳನ್ನು, ಕಾನೂನು ಪರಿಸ್ಥಿತಿಯನ್ನು ನೋಡಿಕೊಂಡು, ಭ್ರಷ್ಟಾಚಾರ ತಡೆ ಕಾಯ್ದೆ 1988ರ 19(1) ಸೆಕ್ಷನ್ ಮತ್ತು ಸಿಆರ್‌ಪಿಸಿ 1973ರ ಸೆಕ್ಷನ್ 197ರ ಅಡಿಯಲ್ಲಿ ಕೇಸು ದಾಖಲಿಗೆ ಅನುಮತಿ ನೀಡುವಲ್ಲಿ ಮೇಲ್ನೋಟಕ್ಕೆ ಆರೋಪವು ಸರಿ ಎಂದು ಕಂಡುಬಂದಿರುವುದೇ ಕಾರಣ" ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.

ದುರುದ್ದೇಶಪೂರ್ವಕವಾಗಿ, ಪಿತೂರಿಯ ಭಾಗವಾಗಿ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ ಎಂಬ ಬಿಜೆಪಿ ಟೀಕೆ ತೀವ್ರವಾದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸುದೀರ್ಘ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಒಂದು ದೂರಿನ ಆಧಾರದಲ್ಲಿ, ನೀಡಲಾದ ದಾಖಲೆಗಳ ಆಧಾರದಲ್ಲಿ ತನಿಖೆ, ವಿಚಾರಣೆ ನಡೆಸದೆಯೇ ಕೇಸು ದಾಖಲಿಸಲು ಅನುಮತಿ ನೀಡಬಹುದೇ ಎಂಬ ಕುರಿತಾದ ಎಲ್ಲ ಸಾಧ್ಯಾಸಾಧ್ಯತೆಗಳನ್ನು, ನಿಯಮಾವಳಿಗಳನ್ನು ಪರಿಶೀಲಿಸಿಯೇ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿರುವ ರಾಜ್ಯಪಾಲರು, ಅರ್ಜಿದಾರರು ಡಿಸೆಂಬರ್ ತಿಂಗಳಲ್ಲಿ ಲೋಕಾಯುಕ್ತ ಪೊಲೀಸರಿಗೆ ಲಿಖಿತ ದೂರು ನೀಡಲು ಹೋಗಿದ್ದರು. ತನಿಖಾ ಏಜೆನ್ಸಿಯು ಕೇಸು ದಾಖಲಿಸಿಕೊಳ್ಳಲು ಸಿದ್ಧವಾಗಿರಲಿಲ್ಲ. ಕಾರಣವೆಂದರೆ, ಮೊದಲ ಆರೋಪಿ ಮುಖ್ಯಮಂತ್ರಿ ಹಾಗೂ ಲೋಕಾಯುಕ್ತ ಪೊಲೀಸರು ಕೂಡ ರಾಜ್ಯ ಸರಕಾರಿ ನೌಕರರಾಗಿದ್ದರು ಎಂದು ತಿಳಿಸಿದ್ದಾರೆ.

ಸ್ವಜನ ಪಕ್ಷಪಾತ, ವಂಚನೆ, ವಿಶ್ವಾಸದ್ರೋಹ ಮುಂತಾದ ಕ್ರಮಗಳಿಂದಾಗಿ ಮುಖ್ಯಮಂತ್ರಿ ಮತ್ತು ಕುಟುಂಬಿಕರಿಗೆ 371.24 ಕೋಟಿ ರೂಪಾಯಿಯಷ್ಟು ಲಾಭವಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಜ್ಯಪಾಲರ ಹೇಳಿಕೆ ತಿಳಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ