ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ ಭಾರಧ್ವಾಜ್ ನೀಡಿರುವ ಆದೇಶವನ್ನು ಖಂಡಿಸಿ ಬಿಜೆಪಿ ಪಕ್ಷವು ರಾಜ್ಯವ್ಯಾಪಕವಾಗಿ ಶನಿವಾರ ಬಂದ್‌ಗೆ ಕರೆ ನೀಡಿತ್ತು.
ಆದರೆ ಮೈಸೂರಿನಲ್ಲಿದು ಕೌಟುಂಬಿಕ ಕಲಹಕ್ಕೆ ವೇದಿಕೆಯಾಗಿತ್ತು. ಶನಿವಾರ ಬಂದ್ ಆಚರಣೆ ವೇಳೆ ಅನರ್ಹಗೊಂಡ ಶಾಸಕ ಎಚ್. ಎಸ್. ಶಂಕಲಿಂಗೇಗೌಡ ಮುಚ್ಚಿಸಿದ್ದ ಅಂಗಡಿಯನ್ನು ತೆರಿಸಿದ್ದರು. ಆದರೆ ನಗರಪಾಲಿಕೆಯಲ್ಲಿ ಬಿಜೆಪಿ ಸದಸ್ಯರಾಗಿರುವ ಮಗ ನಂದೀಶ್ ಪ್ರೀತಂ ಅಂಗಡಿಗಳನ್ನು ಮತ್ತೆ ಮುಚ್ಚಿಸುತ್ತಾ ಸಾಗಿದರು. ಇದು ಸಾರ್ವಜನಿಕವಾಗಿ ಅಪ್ಪ-ಮಗ ಕಲಹಕ್ಕೆ ಕಾರಣವಾಯಿತು.
ಚಾಮರಾಜ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದರೂ ಸಚಿವ ಸ್ಧಾನ ನೀಡಲ್ಲವೆಂಬ ಕಾರಣಕ್ಕಾಗಿ ಅತೃಪ್ತಗೊಂಡಿದ್ದ ಶಂಕಲಿಂಗೇಗೌಡ ಮುಖ್ಯಮಂತ್ರಿ ವಿರುದ್ಧ ಬಂಡಾಯವೆದ್ದ ಶಾಸಕರ ಜತೆ ಸೇರಿಕೊಂಡಿದ್ದರು. ನಂತರ ಶಾಸಕತ್ವದಿಂದ ಅನರ್ಹಗೊಂಡ ಅವರು ಜೆಡಿಎಸ್ ಜತೆ ಗುರುತಿಸಿಕೊಂಡಿದ್ದರು.
ರಾಜ್ಯದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಅಂಗಡಿ ಮುಗ್ಗಟ್ಟುಗಳನ್ನು ಬಲವಂತಾಗಿ ಮುಚ್ಚಿಸಲು ಯತ್ನಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಇದರೊಂದಿಗೆ ಆಡಳಿತ ಬಿಜೆಪಿ ಪಕ್ಷವೇ ಬಂದ್‌ಗೆ ಬೆಂಬಲ ಸೂಚಿಸುತ್ತಿವೆಂಬ ಆರಪೋ ಕೇಳಿಬಂದಿವೆ.