ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕೀಯಕ್ಕೆ ವಿರಾಮ; ಪೊಲಿಯೊ ಅಭಿಯಾನಕ್ಕೆ ಸಿಎಂ ಚಾಲನೆ (National Polio Eradication Scheme | Karnataka | State Politics | Polio)
ಭಾನುವಾರ ದೇಶದದ್ಯಾಂತ ಪಲ್ಸ್ ಪೊಲಿಯೊ ಆಂದೋಲನ ನಡೆಯುತ್ತಿದೆ. ಇದರಂತೆ ಎಲ್ಲ ರಾಜಕೀಯ ಚಟುವಟಿಕೆಗಳಿಗೆ ಸ್ವಲ್ಪ ಹೊತ್ತು ವಿರಾಮ ಹಾಕಿದ ಮುಖ್ಯಮುಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ನಡೆದ ಪಲ್ಸ್ ಪೊಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪಲ್ಸ್ ಪೊಲಿಯೊ ಆಂದಲೋನಕ್ಕೆ ಅಧಿಕೃತ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಪೊಲಿಯೊ ಮುಕ್ತ ರಾಜ್ಯವನ್ನಾಗಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಪೊಲಿಯೊ ಮಾರಕವಾದ ಕಾಯಿಲೆ. ಇದನ್ನು ತಡೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲ ತಾಯಿಂದರು ಐದು ವರ್ಷದೊಳಗಿನ ಮಕ್ಕಳನ್ನು ಕರೆದುಕೊಂಡು ಬಂದು ಪೊಲಿಯೊ ಡ್ರಾಪ್ ಹಾಕಿಸಿಕೊಳ್ಳಬೇಕು ಎಂದವರು ಇದೇ ಸಂದರ್ಭದಲ್ಲಿ ವಿನಂತಿ ಮಾಡಿದರು.
ರಾಜ್ಯದಲ್ಲಿ ಹಾಸನ, ಹಾವೇರಿ, ಬೆಳಗಾವಿ, ಉಡುಪಿ ಸೇರಿದಂತೆ ಹಲವೆಡೆ ಲಸಿಕೆ ಹಾಕಿಸಲಾಗುತ್ತಿದೆ. ರಾಷ್ಟ್ರೀಯ ಪೊಲಿಯೊ ನಿವಾರಣೆ ಯೋಜನೆಯ ಅಡಿಯಲ್ಲಿ ನಡೆಯುವ ಈ ಅಭಿಯಾನದಲ್ಲಿ 73.18 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಜೀವಹನಿ ನೀಡುವ ಗುರಿಯಿರಿಸಿಕೊಳ್ಳಲಾಗಿದೆ.
ರಾಜ್ಯದದ್ಯಾಂತ ಶನಿವಾರ ನಡೆದ ಬಂದ್‌ನ ಹೊರತಾಗಿಯೂ 97,110 ಲಸಿಕೆ ಹಾಕುವವರು ಸಿದ್ಧತೆ ಕೈಗೊಂಡಿದ್ದಾರೆ. ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ನಡೆಯಲಿರುವ ಲಸಿಕೆ ಕಾರ್ಯಕ್ರಮಕ್ಕಾಗಿ 31,000 ಪೊಲಿಯೊ ಬೂತ್‌ಗಳನ್ನು ಸಜ್ಜುಗೊಳಿಸಲಾಗಿದೆ.
ಕರ್ನಾಟದಲ್ಲಿ 2004ರ ನಂತರ ಹೆಚ್ಚು ಪೊಲಿಯೊ ಪ್ರಕರಣ ದಾಖಲಾಗಲಿಲ್ಲವಾದರೂ 2007ರಲ್ಲಿ ರಾಮನಗರದಲ್ಲಿ ಇದು ಕಂಡುಬಂದಿತ್ತು. ಇಂದು ಲಸಿಕೆ ನೀಡಲು ಸಾಧ್ಯವಾಗದವರಿಗಾಗಿ ಫೆಬ್ರವರಿ 27ರಂದು ಎರಡನೇ ಹಂತದ ಲಸಿಕೆ ಕಾರ್ಯಕ್ರಮ ನಡೆಯಲಿದೆ.