ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಿರಂಗ ಯಾತ್ರೆ; ಶ್ರೀನಗರ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ತಡೆ (Bharatiya Janata Party | Republic Day | flag hoisting | Karnataka)
ತಿರಂಗ ಯಾತ್ರೆ; ಶ್ರೀನಗರ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ತಡೆ
ಬೆಂಗಳೂರು, ಭಾನುವಾರ, 23 ಜನವರಿ 2011( 14:25 IST )
ಗಣರಾಜ್ಯೋತ್ಸವದಂದು ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ರಾಷ್ಟ್ರೀಯ ಏಕತಾ ಯಾತ್ರೆ ಹಮ್ಮಿಕೊಂಡಿದೆ. ಇದರಂತೆ ಶ್ರೀನಗರ ತೆರಳುತ್ತಿದ್ದ 1500ರಷ್ಟು ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಮಹಾರಾಷ್ಟ್ರದಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ.
ಬಿಜೆಪಿ ಬೆಂಬಲಿಗರು ವಿಶೇಷ ರೈಲಿನಲ್ಲಿ ಬೆಂಗಳೂರಿನಿಂದ ಕಾಶ್ಮೀರ ಪಯಣ ಬೆಳೆಸಿದ್ದರು. ಆದರೆ ರಾಷ್ಟ್ರೀಯ ಏಕತೆ ಯಾತ್ರೆಗೆ ಪೊಲೀಸರು ತಡೆ ಹಿಡಿದಿದ್ದಾರೆ.
ಅಹ್ಮದ್ ನಗರದ ಸರೋಳಾ ರೈಲ್ವೇ ನಿಲ್ದಾಣದಲ್ಲಿ 1500 ಕಾರ್ಯಕರ್ತರನ್ನು ತಡೆಹಿಡಿಯಲಾಗಿದೆ. ಕಾರ್ಯಕರ್ತರೆಲ್ಲ ಗಾಢ ನಿದ್ರೆಯಲ್ಲಿದ್ದಾಗ ಮಧ್ಯರಾತ್ರಿ 1.30ರ ಸುಮಾರಿಗೆ ಅವರಿದ್ದ ಬೋಗಿ ಕಳಚಿ ಮತ್ತೊಂದು ಇಂಜಿನ್ ಜೋಡಿಸಿ ಬೆಂಗಳೂರಿಗೆ ವಾಪಸ್ ಕರೆತಂದಿದ್ದಾರೆ. ಇದರಿಂದಾಗಿ ರೈಲ್ವೇ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು.
ತಡೆ ಒಡ್ಡಿದ ಪೊಲೀಸರ ವಿರುದ್ಧ ಪ್ರತಿಭಟನೆ ನಿರತ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆಯು ನಡೆದಿದೆ. ಅಲ್ಲದೆ ಗಾಣಗಾಪುರ ನಿಲ್ದಾಣದಲ್ಲಿ ದಾಂಧಲೆ ನಡೆಸಿದ್ದ ಕಾರ್ಯಕರ್ತರು ರೈಲು ಕಚೇರಿಗೆ ಕಲ್ಲು ತೂರಾಟ ನಡೆಸಿದ್ದಾರೆ.
ಕಾಶ್ಮೀರ ಲಾಲ್‌ಚೌಕ್‌ದಲ್ಲಿ ನಡೆಯಲಿರುವ ತಿರಂಗ ಯಾತ್ರೆಯಲ್ಲಿ ಅಶಾಂತಿ ಉಂಟಾಗಬಹುದೆಂಬ ಕಾರಣಕ್ಕಾಗಿ ಪೊಲೀಸರು ಯಾತ್ರೆಗೆ ತಡೆ ಒಡ್ಡಿದ್ದಾರೆ.
ಸಿಎಂ ಆಕ್ರೋಶ... ಸ್ವತಂತ್ರ ಭಾರತದಲ್ಲಿ ಧ್ವಜಾರೋಹಣ ಮಾಡುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೂ ಇದೆ. ಇದನ್ನು ಪ್ರಶ್ನಿಸುವ ಹಕ್ಕು ಯಾರು ಕೂಡಾ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಾಶ್ಮೀರವನ್ನು ಪ್ರತ್ಯೇಕ ಮನೋಭಾವದಿಂದ ನೋಡುವುದು ತೀವ್ರವಾಗಿ ಖಂಡಿಸುತ್ತೇನೆ. ಇದನ್ನು ದೆಹಲಿಗೆ ತೆರಳಿ ಪ್ರಧಾನಿ ಗಮನಕ್ಕೆ ತರವುದಾಗಿಯೂ ಅವರು ತಿಳಿಸಿದರು.