ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ಕಾನೂನು ಹೋರಾಟ ಸಾರಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚಿಸಲು ದೆಹಲಿಗೆ ಪಯಣಿಸಿದ್ದಾರೆ.
ನಂತರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿನಲ್ಲಿ ರಾಜ್ಯಪಾಲ ವಿರುದ್ಧ ಕೆಂಡಾಮಂಡಲರಾದ ಯಡಿಯೂರಪ್ಪ, ನಾಯಕತ್ವ ಬದಲಾಯಿಸಲು ರಾಜ್ಯಪಾಲರು ಯಾರು ಎಂದು ಪ್ರಶ್ನಿಸಿದರು.
ನಾಯಕತ್ವ ನಿರ್ಧರಿಸೋದು ರಾಜ್ಯಪಾಲರಲ್ಲ. ಇದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಇದರಲ್ಲಿ ಮೂಗು ತೂರಿಸಲು ರಾಜ್ಯಪಾಲರು ಯಾರು ಎಂದು ವಾಗ್ದಾಳಿ ನಡೆಸಿದರು.
ಸೋಮವಾರ ಕರ್ನಾಟಕದ ಸಂಸದರ ಜತೆ ಸೇರಿ ರಾಷ್ಟ್ರಪತಿ ಭೇಟಿ ಮಾಡಲಿರುವ ಸಿಎಂ, ಗವರ್ನರ್ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ರಾಜ್ಯಪಾಲರ ಸಂವಿಧಾನ ಬಾಹಿರ ನಡವಳಿಕೆಗೆ ಬಗ್ಗೆ ರಾಷ್ಟ್ರಪತಿಗೆ ವಿವರಣೆ ನೀಡಲಾಗುವುದು.
ಇದಕ್ಕೂ ಮೊದಲು ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿರುವ ಸಿಎಂ ಮುಂದಿನ ಕಾನೂನು ಹೋರಾಟಕ್ಕೆ ಸಜ್ಜಾಗಲಿದ್ದಾರೆ ಎನ್ನಲಾಗಿದೆ. ನಂತರ ಗೃಹ ಸಚಿವ ಚಿದಂಬರಂ ಅವರನ್ನು ಭೇಟಿ ಮಾಡಿ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವ ಸಂಭವವಿದೆ.