ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಅನುಮತಿ ನೀಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕ್ರಮ ಖಂಡಿಸಿ ಇಂದು ಬಿಜೆಪಿ ನಾಯಕರು ರಾಜಭವನದಲ್ಲಿ ಧರಣಿ ನಡೆಸಲಿದ್ದಾರೆ.
ಸಿಎಂ ನಿವಾಸದಲ್ಲಿ ಮುಖಂಡರ ಚರ್ಚೆಯ ಬಳಿಕ ಬೆಳಗ್ಗೆ 11ರ ಹೊತ್ತಿಗೆ ರಾಜಭವದಲ್ಲಿ ಗವರ್ನರ್ ಹಠಾವೋ ಎಂಬ ಘೋಷಣೆಯೊಂದಿಗೆ ಆಂದೋಲನ ನಡೆಸಲಿದ್ದೇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಶನಿವಾರ ನಡೆದ ಬಂದ್ ನಂತರದ ಎಲ್ಲ ಬೆಳವಣಿಗೆಗಳ ಬಗ್ಗೆ ಶಾಸಕರಿಗೆ ಸಿಎಂ ಮನವರಿಕೆ ಮಾಡಲಿದ್ದಾರೆ. ಸಭೆಯಲ್ಲಿ ಸೋಮಣ್ಣ, ಧನಂಜಯ್ ಕುಮಾರ್, ಅನಂತ್ ಕುಮಾರ್ ಸಹಿತ ಪಕ್ಷ ಇತರ ಮುಖಂಡರು ಉಪಸ್ಥಿತರಿರಲಿದ್ದಾರೆ.
ಕಾಂಗ್ರೆಸ್ ಏಂಜೆಟ್ ಹಾಗೂ ಸಂವಿಧಾನ ಬಾಹಿರವಾಗಿ ವರ್ತಿಸುತ್ತಿರುವ ಗವರ್ನರ್ ವಿರುದ್ಧ ಬಹಿರಂಗ ಹೋರಾಟಕ್ಕೆ ಪಕ್ಷ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಇದೀಗಲೇ ರಾಷ್ಟ್ರಪತಿ ಭೇಟಿ ಮಾಡಿ ದೂರು ನೀಡಲಾಗಿದೆ. ಬಿಜೆಪಿ ವರಿಷ್ಠ ಎಲ್. ಕೆ. ಅಡ್ವಾಣಿ ಸ್ವತ: ರಾಷ್ಟ್ರಪತಿ ಭೇಟಿ ಮಾಡಿದ್ದಾರೆ. ಇದೀಗ ರಾಜಭವನ ಚಲೋ-ಗವರ್ನರ್ ಹಠಾವೋ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಸಿಎಂ ಯಡಿಯೂರಪ್ಪ ಮತ್ತು ಗವರ್ನರ್ ಹಂಸರಾಜ್ ಭಾರಧ್ವಾಜ್ ನಡುವಣ ಸಮರ ಮತ್ತಷ್ಟು ತಾರಕ್ಕೇರಿದೆ.