ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಪಾದನೆಗೆ ಸಿದ್ಧರಾಗಿ: ಬೇನಾಮಿ ಆಸ್ತಿ ಮಾಹಿತಿಗೆ ಇನಾಮು! (Illegal Land | Prize | Benami Land | Bangalore | Bengaluru | CM Yaddyurappa | BJP Government)
Bookmark and Share Feedback Print
 
ಬೆಂಗಳೂರು: ಬೆಂಗಳೂರಿಗರೇ! ಭರ್ಜರಿ ಹಣ ಸಂಪಾದನೆಗೆ ಸಿದ್ಧರಾಗಿ! ನಗರದಲ್ಲಿ ಏನಾದರೂ ಬೇನಾಮಿ ಹೆಸರಿನಲ್ಲಿ ಅಕ್ರಮ ಆಸ್ತಿ ಇದೆ ಎಂಬುದು ನಿಮ್ಮ ಗಮನಕ್ಕೆ ಬಂದ ತಕ್ಷಣವೇ ಅದನ್ನು ಬಿಜೆಪಿ ಸರಕಾರಕ್ಕೆ ತಿಳಿಸಿಬಿಡಿ. ನೀವು ಕೊಟ್ಟ ಮಾಹಿತಿ ಸರಿಯಾಗಿದ್ದರೆ ನಿಮಗೆ ಭರ್ಜರಿ ಬಹುಮಾನ ಕಾದಿದೆ.

ಹಗರಣಗಳ ಆರೋಪದಿಂದ ರೋಸಿಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಪ್ರಸ್ತಾವನೆಯನ್ನು ಮಂಗಳವಾರ ಘೋಷಿಸಿದ್ದಾರೆ. ಬೇನಾಮಿ ಆಸ್ತಿಪಾಸ್ತಿ ಕುರಿತು ನಾಗರಿಕರು ಮಾಹಿತಿ ನೀಡಲು ಕೋರಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುತ್ತದೆ, ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನವನ್ನೂ ಕೊಡಲಾಗುತ್ತದೆ. ಇದಕ್ಕಾಗಿ ಬಜೆಟ್‌ನಲ್ಲಿ 5 ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಭ್ರಷ್ಟಾಚಾರಗಳ ಬಗ್ಗೆ ಆರೋಪಗಳ ಸುರಿಮಳೆಯೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಅಕ್ರಮ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವ ಈ ಕ್ರಮಕ್ಕೆ ಯಡಿಯೂರಪ್ಪ ಮುಂದಾಗಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ರಾಜಭವನದಲ್ಲಿ ಬಿಜೆಪಿ ಪ್ರತಿಭಟನೆ...
ಬೆಳಿಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಬಿಜೆಪಿ ಶಾಸಕರು, ಸಂಸದರು ಮತ್ತು ಸಚಿವರೆಲ್ಲರೂ ರಾಜಭವನದ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ, ಪಕ್ಷಪಾತತನದಿಂದ ವರ್ತಿಸುತ್ತಿರುವ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರನ್ನು ಕೇಂದ್ರವು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಆಗ್ರಹಿಸಿತು.

'ರಾಜ್ಯಪಾಲರಿಗೆ ಧಿಕ್ಕಾರ, ಹಂಸರಾಜ ಭಾರದ್ವಾಜರೇ ವಾಪಸ್ ಹೋಗಿ' ಎಂದು ಕೂಗಿದ ಎಲ್ಲ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ರಾಜಭವನದ ಎದುರು ಭಾರೀ ಭದ್ರತೆ ಏರ್ಪಡಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ