ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದಲ್ಲಿನ್ನು ಕಾಂಗ್ರೆಸ್, ಬಿಜೆಪಿ ಆಂದೋಲನ ಪರ್ವ (Bangalore | CM Yaddyurappa | Parameshwar | Congress | BJP)
Bookmark and Share Feedback Print
 
ಕರ್ನಾಟಕ ವಾಸಿಗಳು ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ಎದುರಿಸಬೇಕಾಗಿದೆ. ಒಂದೆಡೆಯಿಂದ 'ರಾಜ್ಯಪಾಲರೇ ರಾಜ್ಯಬಿಟ್ಟು ತೊಲಗಿ' ಎಂಬ ಘೋಷಣೆಯೊಂದಿಗೆ ಆಡಳಿತಾರೂಢ ಬಿಜೆಪಿ ಶಾಸಕರು ಬೀದಿಗಿಳಿದು ಹೋರಾಟ ನಡೆಸಲಿದ್ದರೆ, ಇನ್ನೊಂದೆಡೆ 'ಯಡಿಯೂರಪ್ಪ ಅವರೇ, ಕುರ್ಚಿ ಬಿಟ್ಟು ತೊಲಗಿ' ಎಂದು ಒತ್ತಾಯಿಸಿ ಕಾಂಗ್ರೆಸ್ ಆಂದೋಲನ ನಡೆಸಲಿದೆ. ನಡು ನಡುವೆ ಜೆಡಿಎಸ್ ಕೂಡ ಒಗ್ಗರಣೆ ಹಾಕುವ ಸಾಧ್ಯತೆಗಳಿವೆ.

ಬಿಜೆಪಿ ರ‌್ಯಾಲಿ:
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕಾಂಗ್ರೆಸ್, ಜೆಡಿಎಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ, ಬಿಜೆಪಿಯು ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ಅನುಕ್ರಮವಾಗಿ ಫೆ.5, 6 ಮತ್ತು 7ರಂದು ರ‌್ಯಾಲಿಗಳನ್ನು ನಡೆಸಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಕೇಂದ್ರೀಯ ನಾಯಕ ವೆಂಕಯ್ಯ ನಾಯ್ಡು, ಸಂಸದರು, ಶಾಸಕರು ಮತ್ತು ಸಚಿವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಈಶ್ವರಪ್ಪ ಮಂಗಳವಾರ ತಿಳಿಸಿದ್ದು, ರಾಜ್ಯಪಾಲರು ರಾಜ್ಯದಿಂದ ಹೋಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಪಕ್ಷದ ಸಂಸದರು ಮತ್ತು ಶಾಸಕರ ವಿಶೇಷ ಸಮಾವೇಶವೊಂದು ನಾಗ್ಪುರದಲ್ಲಿ ಫೆ.8ರಂದು ನಡೆಯಲಿದ್ದು, ಇದರಲ್ಲಿ ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿ ಮತ್ತು ನಿತಿನ್ ಗಡ್ಕರಿ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು. ಅಲ್ಲದೆ, ಬೆಂಗಳೂರಿನಲ್ಲಿ ಫೆಬ್ರವರಿ 20ರಂದು ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು, ಇದಕ್ಕೆ 2.20 ಲಕ್ಷ ಮಂದಿಗೆ ಆಹ್ವಾನ ನೀಡಲಾಗಿದೆ. ನಿತಿನ್ ಗಡ್ಕರಿ ಅವರು ಮಾತನಾಡಲಿದ್ದಾರೆ ಎಂದರು ಈಶ್ವರಪ್ಪ.

ಜ.30ರಿಂದ ಕಾಂಗ್ರೆಸ್ ಆಂದೋಲನ
ಇನ್ನೊಂದೆಡೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಅವರೂ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿರುವುದರಿಂದ ಅವರ ರಾಜೀನಾಮೆಗೆ ಆಗ್ರಹಿಸಿ ಜನವರಿ 30ರಂದು ಬೃಹತ್ ಪ್ರತಿಭಟನೆ ನಡೆಸಲಿರುವುದಾಗಿ ಹೇಳಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು ಮತ್ತಿತರ ನಾಯಕರ ಸಭೆಯ ಬಳಿಕ ಮಾತನಾಡಿದ ಅವರು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದರು.

ಯಡಿಯೂರಪ್ಪ ಅವರು ರಾಜೀನಾಮೆ ನೀಡುವವರೆಗೂ ಹಂತಹಂತವಾಗಿ ಪ್ರತಿಭಟನೆಗಳನ್ನು ನಡೆಸುವುದಾಗಿ ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ