ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಶ್ರಯ ಯೋಜನೆಯಡಿ 2.96 ಲಕ್ಷ ಮನೆ: ಸೋಮಣ್ಣ (Somanna | BJP | Yeddyurappa | Congress | JDS)
ರಾಜ್ಯದ 196 ತಾಲೂಕುಗಳಲ್ಲಿ ಆಶ್ರಯ ಯೋಜನೆಯಡಿ 2.96 ಲಕ್ಷ ಮನೆಗಳನ್ನು ಶೀಘ್ರವೇ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವೀರಶೈವ ಲಿಂಗಾಯಿತ ನೌಕರರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, 'ಬಸವ ಆಶ್ರಯ' ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರಕಾರ 1.35 ಲಕ್ಷ ರೂ. ಸಾಲ ನೀಡುತ್ತಿದೆ. 20 ಲಕ್ಷ ಬಡ ಕುಟುಂಬಗಳು ಮನೆ ನಿರ್ಮಿಸಿಕೊಳ್ಳಲು ಬಡ್ಡಿ ರಹಿತ ಆರ್ಥಿಕ ಸಹಾಯ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅನೇಕ ಮಂದಿ ತಲೆ ಮೇಲೊಂದು ಸೂರು ಕಾಣದಿರಲು ರಾಜ್ಯದಲ್ಲಿ ಇದುವರೆಗೂ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕಾರಣ. ಈ ಎರಡು ಪಕ್ಷ ರಾಜ್ಯದ ಅಭಿವೃದ್ಧಿಗೆ ಕಂಟಕವಾಗಿವೆ ಎಂದು ಆರೋಪಿಸಿದರು.

ಎರಡು ದಿನಗಳಲ್ಲಿ ಜಿಲ್ಲೆಗೆ 20 ಸಾವಿರ ಆಶ್ರಯ ಮನೆಗಳನ್ನು ಹಸ್ತಾಂತರಿಸಲಾಗುವುದು. ಆಶ್ರಯ ಮನೆಗಳನ್ನು ಹಂಚುವಾಗ ಅರ್ಹ ಫಲಾನುಭವಿಗಳಿಗೇ ಹಂಚಬೇಕು. ಇದಕ್ಕಾಗಿ ಫೆಬ್ರುವರಿ ಮೊದಲ ವಾರದಲ್ಲಿ 16 ಲೈನುಗಳುಳ್ಳ ಸಹಾಯವಾಣಿ ಪ್ರಾರಂಭಿಸಲಾಗುತ್ತದೆ. ಯಾವುದೇ ದೂರು ಬಂದರೂ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.