ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಟೋರಿಯಸ್ ಕ್ರಿಮಿನಲ್ ರೆಡ್ಡಿ ಎನ್‌ಕೌಂಟರ್‌ಗೆ ಬಲಿ (Bangalore | Criminal | Encounter | Karnataka | CCB police)
ಐದಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ಹಂತಕ ನಾಗೇಂದ್ರ ರೆಡ್ಡಿ ಮಂಗಳವಾರ ಮುಂಜಾನೆ ಸಿಸಿಬಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ಘಟನೆ ರಾಮಮೂರ್ತಿ ನಗರದ ಕಲ್ಕೆರೆ ಎಂಬಲ್ಲಿ ನಡೆದಿದೆ.

ಇಂದು ಮುಂಜಾನೆ ಟವೇರಾ ಕಾರಿನಲ್ಲಿ ರೆಡ್ಡಿ ಹೊರಟಿರುವ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು, ಏತನ್ಮಧ್ಯೆ ರೆಡ್ಡಿ ರಾಮಮೂರ್ತಿ ನಗರದ ಸಮೀಪ ಪೊಲೀಸರ ಮೇಲೆಯೇ ಎರಡು ಸುತ್ತಿನ ಗುಂಡು ಹಾರಿಸಿದ್ದ, ಇದರಿಂದಾಗಿ ಪೊಲೀಸರು ಪ್ರತಿ ದಾಳಿ ನಡೆಸಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಾಗೇಂದ್ರ ರೆಡ್ಡಿ ಅಲಿಯಾಸ್ ನಾಗಿ ರೆಡ್ಡಿ ಅಲಿಯಾಸ್ ವಿಷ್ಣು ಕುಮಾರ್ ಮೂಲತಃ ಆಂಧ್ರಪ್ರದೇಶ ಮೂಲದವನು. ಈತ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ. 2002ರಲ್ಲಿ ಲಂಡನ್‌ನಲ್ಲಿ ಉದ್ಯೋಗದಲ್ಲಿ ಸಂದರ್ಭದಲ್ಲಿ ತನ್ನ ಸ್ನೇಹಿತ ರಾಧಾಕೃಷ್ಣ ಎಂಬವರನ್ನೇ ಹತ್ಯೆಗೈದು ಆತನ ತಲೆ ಮತ್ತು ಕೈ ಬೆರಳು ಕತ್ತರಿಸಿ ಸುಟ್ಟು ಹಾಕಿದ್ದ. ಬಳಿಕ ಅಲ್ಲಿಂದ ಭಾರತಕ್ಕೆ ಪರಾರಿಯಾಗಿದ್ದ.

ಬೆಂಗಳೂರಿನ ಉಪ್ಪಾರ ಪೇಟೆಯ ಮಹಾಲಕ್ಷ್ಮಿ ಲಾಡ್ಜ್‌ನಲ್ಲಿಯೂ ತನ್ನ ಗೆಳೆಯನೊಬ್ಬನನ್ನು ಕೊಂದು ಹಾಕಿದ್ದ. 2005ರಲ್ಲಿ ಬೆಳಗಾವಿ ಪೊಲೀಸ್ ಪೇದೆಯೊಬ್ಬನನ್ನು ಕೊಂದು ಪರಾರಿಯಾಗಿದ್ದ. ಈ ನಟೋರಿಯಸ್ ಹಂತಕ ರೆಡ್ಡಿ ಎರಡು ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಅಷ್ಟೇ ಅಲ್ಲ ಈತ ಲಂಡನ್, ಸಿಕಂದರಬಾದ್, ಬೆಳಗಾವಿ, ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದ.
ಸಂಬಂಧಿತ ಲೇಖನಗಳು