ಕನ್ನಡ ಜೀವನಕ್ಕೆ ಬೇಕಾದ ಎಲ್ಲ ಮುಖಗಳನ್ನು ಉಳಿಸಬೇಕಾದ ಚಳವಳಿಯ ಅಗತ್ಯವಿದೆ. ರೈತರು ಕೃಷಿ ಬಿಟ್ಟು ನಗರದತ್ತ ಮುಖ ಮಾಡಿದರೆ ಭೂಮಿ ಕಾಪಾಡೋರು ಯಾರು ಎಂದು 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ| ಜಿ, ವೆಂಕಟ ಸುಬ್ಬಯ್ಯ ಪ್ರಶ್ನಿಸಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಜರುಗಿದ ಸಂವಾದದಲ್ಲಿ ಬಾಗವಹಿಸಿದ ಅವರು, ಕನ್ನಡ ಚಳವಳಿಯಲ್ಲಿ ಮಂಚೂಣಿಯಲ್ಲಿರಬೇಕೆಂಬ ಆಸೆ ನನಗಿದೆ. ಆದರೆ ವಯಸ್ಸಾಗಿದೆ. 20 ವರ್ಷ ಕಡಿಮೆ ಇದ್ದಿದ್ದರೆ ಏನಾದರೂ ಮಾಡಬಹುದಿತ್ತು .ಕನ್ನಡ ಉಳಿಸುವುದು ಅಧ್ಯಾಪಕರ, ಪತ್ರಕರ್ತರ ಕೆಲಸ. ಅನಗತ್ಯ ಇಂಗ್ಲಿಷ್ ತುರುಕುವುದನ್ನು ನಿಲ್ಲಿಸಿ. ಕನ್ನಡವನ್ನೆ ಬಳಸುವುದು ರೂಢಿಯಾಗಲಿ ಎಂದು ಕಿವಿಮಾತು ಹೇಳಿದರು.
ನಗರ ಜೀವನದಲ್ಲಿ ಸಿಗುವ ಸೌಲಭ್ಯ ಸುಖವನ್ನು ಗ್ರಾಮೀಣರಿಗೂ ಸಿಗುವಂತೆ ಮಾಡಬೇಕಾದುದು ಸರ್ಕಾರದ ಹೊಣೆ. ಭಾಷೆಯ ಬಗೆಗಿನ ಚಳವಳಿ ಮಾತ್ರವಲ್ಲ ಕುಲಾಂತರಿ ಅಪಾಯ, ನೀರು. ಕೃಷಿ, ಸಂಪತ್ತಿನ ಕುರಿತು ನಮ್ಮ ಸತ್ವನ್ನು ಉದ್ದಾರ ಮಾಡುವ ಆಂದೋಲನ ಬೇಕು. ಯುವಕರ ಮೇಲೆ ಗುರುತರವಾದ ಹೊಣೆ ಇದ್ದು ಆಂದೋಲನಕಕ್ಕೆ ಇದು ಸಕಾಲ. ಇರುವ ಸಮೃದ್ದಿಯೂ ಎಲ್ಲ ಜನರ ಸುಖಕ್ಕೂ ಒದಗುವಂತಹ ವ್ಯವಸ್ಥೆಗೆ ಆಂದೋಲನ ಬೇಕಾಗಿದೆ.ಎಂದರು.