ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲಿಂಗಾಯಿತರನ್ನ ಕಡೆಗಣಿಸಲ್ಲ;ಪಕ್ಷದ 'ಕೈ' ಬಿಡಬೇಡಿ: ಪರಮೇಶ್ವರ್ (KPCC | Parameshwar | Congress | BJP | Election)
ಪಕ್ಷದಲ್ಲಿ ಲಿಂಗಾಯಿತ ಸಮುದಾಯವನ್ನು ಕಡೆಗಣಿಸಲಾಗಿದೆ ಎನ್ನುವ ಅಸಮಾಧಾನಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಶುಕ್ರವಾರ, ಪಕ್ಷದ ಲಿಂಗಾಯಿತ ಶಾಸಕರು, ಮಾಜಿ ಸಚಿವರು ಹಾಗೂ ಮುಖಂಡರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು.

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಪಕ್ಷದ ಲಿಂಗಾಯಿತ ಹಿರಿ-ಕಿರಿಯ ಮುಖಂಡರು ಸಭೆ ನಡೆಸಿದ ಪರಮೇಶ್ವರ್ ಅವರು ಪಕ್ಷದ ಬೆನ್ನೆಲುಬಾಗಿರುವ ವೀರಶೈವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಿಲ್ಲ, ಮುಂದೆಯೂ ಕಡೆಗಣಿಸುವುದಿಲ್ಲ ಎಂದು ಹೇಳಿದರು.

ವೀರಶೈವರನ್ನು ಕಡೆಗಣಿಸಲಾಗಿದೆ ಎನ್ನುವ ಅಭಿಪ್ರಾಯಗಳು ಉಂಟಾಗಿರುವುದು ಸಹಜ, ಇಲ್ಲಿಯವರೆಗೆ ಆಗಿರುವ ತಪ್ಪು-ಒಪ್ಪುಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಅವರು ಮನವಿ ಮಾಡಿದರು.

ರಾಜಕೀಯ ಅಸ್ಥಿರತೆಯನ್ನು ಅವಲೋಕಿಸಿದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಯಾವಾಗ ಬೇಕಾದರೂ ಪತನವಾಗಬಹುದು. ಇಂತಹ ಸನ್ನಿವೇಶದಲ್ಲಿ ಪಕ್ಷದ ಲಿಂಗಾಯಿತ ಮುಖಂಡರೆಲ್ಲ ಪಕ್ಷ ಸಂಘಟನೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಭೆಯಲ್ಲಿ ಹೇಳಿದರು.

ರಾಜ್ಯದಲ್ಲಿ ಲಿಂಗಾಯಿತರ ಬೆಂಬಲ ಈಗಲೂ ಕಾಂಗ್ರೆಸ್ ಪಕ್ಷಕ್ಕಿದೆ. ಆದರೆ ಕೆಲ ವಿರೋಧಿಗಳು ಲಿಂಗಾಯಿತ ಮುಖಂಡರನ್ನು ಕಡೆಗಣಿಸಲಾಗಿದೆ ಎನ್ನುವ ಅಪಪ್ರಚಾರ ಮಾಡುತ್ತಿದ್ದು, ಇದನ್ನು ಹೋಗಲಾಡಿಸಿ ಕಾಂಗ್ರೆಸ್‌ನ ಗತವೈಭವವನ್ನು ಮರಳಿ ತರಲು ಪ್ರಯತ್ನಿಸುವಂತೆ ಅವರು ಮನವಿ ಮಾಡಿದರು.
ಇವನ್ನೂ ಓದಿ