ಘನತೆವೆತ್ತ ರಾಜ್ಯಪಾಲರು ಹೇಳಿದಂತೆ ನಾನು ಕೋಮವಾದಿಯಲ್ಲ ಸತ್ಯವಾದಿ ಎಂದು ಹಿರಿಯ ಸಂಶೋಧಕ ಚಿದಾನಂದಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಮತಾಂತರಕ್ಕೆ ನನ್ನ ಪ್ರಬಲ ವಿರೋಧವಿದೆ.ಮತಾಂತರದ ವಿರುದ್ಧ ಹೇಳಿಕೆ ನೀಡಿದ್ದೇನೆ ಹೊರತು ಕೋಮವಾದವಲ್ಲ ಎಂದು ಚಿಮೂ ಹೇಳಿದ್ದಾರೆ.
ರಾಜ್ಯಪಾಲರ ಹೇಳಿಕೆಯಿಂದ ಒಂದು ಕ್ಷಣ ನನ್ನ ಮೈ ಬಿಸಿಯಾಯಿತು. ಇಂತಹ ಹೇಳಿಕೆಯನ್ನು ನಾನು ಅವರಿಂದ ನಿರೀಕ್ಷಿಸಿರಲಿಲ್ಲ.ಚರ್ಚ್ ದಾಳಿಯನ್ನು ನಾನು ಸಮರ್ಥಿಸಿಕೊಂಡಿಲ್ಲ. ಮತಾಂತರವನ್ನು ಮಾತ್ರ ವಿರೋಧಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸೋಮಶೇಖರ್ ಆಯೋಗದ ವರದಿಯನ್ನು ನಾನು ಎಲ್ಲಿಯೂ ಬಹಿರಂಗವಾಗಿ ಸಮರ್ಥಿಸಿಕೊಂಡಿಲ್ಲ.ಚರ್ಚ್, ಮಸೀದಿ, ದೇಗಲುಗಳ ಮೇಲೆ ಯಾರೇ ದಾಳಿ ನಡೆಸಿದರೆ ಖಂಡಿಸುತ್ತೇನೆ. ರಾಜ್ಯಪಾಲರ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಚಿದಾನಂದಮೂರ್ತಿ ವಿಷಾದಿಸಿದ್ದಾರೆ.