ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೇಶದ ಭದ್ರತೆ ಮುಖ್ಯ: ಮದನಿ ಜಾಮೀನಿಗೆ ಹೈಕೋರ್ಟ್ ನಕಾರ (Madani | High court | Bangalore blast | Karnataka)
NRB
ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ದೇಶದ ಭದ್ರತೆಗೆ ಮೊದಲ ಆದ್ಯತೆ ಎಂದಿರುವ ಹೈಕೋರ್ಟ್ ಬೆಂಗಳೂರು ಸರಣಿ ಸ್ಫೋಟದ ಶಂಕಿತ ರೂವಾರಿ ಅಬ್ದುಲ್ ನಾಸಿರ್ ಮದನಿಗೆ ಜಾಮೀನು ನೀಡಲು ನಿರಾಕರಿಸಿದೆ.

ದಾಖಲೆಗಳನ್ನು ಪರಿಗಣಿಸಿದಾಗ ಮದನಿ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ. ಸ್ಫೋಟದ ಆರೋಪಿಗಳೊಡನೆ ನಿರಂತರ ಸಂಪರ್ಕದಲ್ಲಿರುವುದು ಖಚಿತವಾಗಿದೆ. ಈ ಸಂದರ್ಭದಲ್ಲಿ ದೇಶದ ಭದ್ರತೆಯ ಕಾರಣದಿಂದ ಮದನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾ.ವಿ.ಜಗನ್ನಾಥನ್ ಮಹತ್ವದ ಆದೇಶ ನೀಡಿದ್ದಾರೆ.

ಮದನಿ ವಿರುದ್ಧ ಕೆಲವೇ ಪರೋಕ್ಷ ಸಾಕ್ಷ್ಯಗಳನ್ನು ದಾಖಲಿಸಿರಬಹುದು. ಆದರೆ, ಅವು ಗಂಭೀರವಾಗಿದೆ. ಕೊಡಗಿನ ಹೊಸತೋಟದಲ್ಲಿ ನಡೆದ ಸಭೆಯಲ್ಲಿ ಮದನಿ ಪಾಲ್ಗೊಂಡಿರುವ ಬಗ್ಗೆ ದಾಖಲೆಗಳು ಇಲ್ಲದಿರಬಹುದು. ಆದರೆ ಅಲ್ಲಿನ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನಿಸಿರುವುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅಲ್ಲದೇ ಮದನಿ ಆರೋಗ್ಯ ಹದಗೆಟ್ಟಿದೆ. ಜೈಲಿನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ ಎಂಬ ಮದನಿ ಪರ ವಕೀಲರ ವಾದವನ್ನು ಮನ್ನಿಸಿರುವ ಹೈಕೋರ್ಟ್, ಮದನಿ ಆರೋಗ್ಯದ ಬಗ್ಗೆ ನಿಗಾ ಇಡಲು ಸರಕಾರಕ್ಕೆ ಸೂಚಿಸಿದೆ.
ಇವನ್ನೂ ಓದಿ