ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾಡ ರಕ್ಷಣಾ ರ‌್ಯಾಲಿ; ಸರಕಾರದ ವಿರುದ್ಧ ಕಾಂಗ್ರೆಸ್ ರಣಕಹಳೆ (Siddaramaiah | Eshwarappa | Yadyurappa | Karnataka)
ಭ್ರಷ್ಟ ಸರಕಾರದ ವಿರುದ್ಧ ಭಾನುವಾರ ಕಾಂಗ್ರೆಸ್ ನಾಡ ರಕ್ಷಣಾ ಸಮಾವೇಶವನ್ನು ಯಶಸ್ವಿಯಾಗಿ ಹಮ್ಮಿಕೊಂಡಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ಸರಕಾರ ಮಂಡಿಸಲಿರುವ ಕೃಷಿ ಬಜೆಟನ್ನು ಕೇವಲ ಗಿಮಿಕ್ ಮಾತ್ರ ಎಂದಿರುವ ಸಿದ್ದು, ನೈತಿಕತೆ ಇದ್ದರೆ ಸಿಎಂ ರಾಜೀನಾಮೆ ನೀಡಿ ತೊಲಗಬೇಕು ಎಂದು ಬಯಸಿದರು.

ಮುಖ್ಯಮಂತ್ರಿ ಬಸವಣ್ಣನ ತತ್ವಗಳಿಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಸವಣ್ಣ ಮೌಢ್ಯತೆಯನ್ನು ವಿರೋಧಿಸುತ್ತಿದ್ದರು. ಆದರೆ ವಾಮಾಚಾರ ಬಗ್ಗೆ ಮಾತನಾಡುತ್ತಿರುವ ಯಡ್ಡಿ ತಮ್ಮ ಕುರ್ಚಿ ಉಳಿವಿಗಾಗಿ ಇಂತಹ ಮೂಢ ನಂಬಿಕೆಗಳಿಕೆ ಮೊರೆ ಹೋಗುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿ ಸರಕಾರದಿಂದ ರಾಜ್ಯದ ಲೂಟಿಯಾಗಿದೆ. ಭಷ್ಟಚಾರ ತಾಂಡವವಾಡುತ್ತಿದ್ದು, ಬಡಜನರಿಗೆ ಒಂದೇ ಒಂದು ಸೈಟನ್ನು ಕೂಡಾ ನೀಡಲಿಲ್ಲ ಎಂದು ಎನ್‌ವಿ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಸಿದ್ದು ಟೀಕೆ ಮಾಡಿದರು.

ರಾಜ್ಯ ಸರಕಾರವನ್ನು ಹತ್ತಿಕ್ಕುವ ಕೆಲಸ ನಾವೇ ಮಾಡಬೇಕು. ಇದಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಸಮಾವೇಶಗಳನ್ನು ನಡೆಸಲಾಗುವುದು ಎಂದವರು ಹೇಳಿದರು. ಮಾತು ಮುಂದುವರಿಸಿದ ಸಿದ್ದು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡಾ ರಾಜ್ಯ ಸರಕಾರದ ವಿರುದ್ದ ತೀವ್ರ ಹರಿಹಾಯ್ದರು. ಜನ ತಿರುಗಿಬಿದ್ರೆ ಯಾವ ಸರಕಾರವೂ ಉಳಿಯಲ್ಲ. ಇದಕ್ಕೆ ಈಜಿಪ್ಟ್ ದಂಗೆಯೇ ಸಾಕ್ಷಿ ಎಂದವರು ಸಿಎಂಗೆ ಕಿವಿಮಾತು ಹೇಳಿದರು. ಇದೇ ವೇಳೆ ರಾಜ್ಯ ಸರಕಾರವನ್ನು ಹುಚ್ಚರ ಸಂತೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದರು.

ಅಭಿವೃದ್ದಿ ಬಗ್ಗೆ ಚರ್ಚೆ ನಡೆಸಿ...
ಮತ್ತೊಂದೆಡೆ ಶಿವಮೊಗ್ಗದಲ್ಲಿ ಪ್ರತಿಪಕ್ಷಗಳ ತೀವ್ರ ವಾಗ್ದಾಳಿಗೆ ಉತ್ತರ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ಅಭಿವೃದ್ದಿ ಬಗ್ಗೆ ಚರ್ಚೆ ನಡೆಸಿ ಎಂದು ವಿಪಕ್ಷಗಳನ್ನು ಬಯಿಸಿದ್ದಾರೆ.

ವಿಧಾನಸಭೆ ಪಾವಿತ್ರ್ಯತೆಯನ್ನು ಕಾಪಾಡಿ ಎಂದು ವಿರೋಧ ಪಕ್ಷಗಳಿಗೆ ಕರೆ ನೀಡಿರುವ ಅವರು, ಹಗರಣದ ದಾಖಲೆಗಳಿದ್ದರೆ ಬಯಲಿಗೆ ತನ್ನಿ ಎಂದು ಸವಾಲು ಹಾಕಿದರು.