ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 2ನೇ ಅವಧಿಗೆ ಲೋಕಾಯುಕ್ತನಾಗೋ ಬಯಕೆ ಇಲ್ಲ: ಹೆಗ್ಡೆ (Lokayuktha | Santhosh hegde | BJP | Yeddyurappa)
ಐದು ತಿಂಗಳಲ್ಲಿ ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿ ಆಗಲಿದ್ದೇನೆ. ಆದರೆ ಸರಕಾರ ಬಯಸಿದರೂ ಮತ್ತೆ ನಾನು ಆ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಅಲ್ಲದೆ ನಿವೃತ್ತಿಯ ನಂತರವೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಅವರು ಎನ್‌ಡಿಟಿವಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಲು ಮಂಗಳವಾರ ನವದೆಹಲಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಅನೌಪಚಾರಿಕವಾಗಿ ಮಾತನಾಡಿ, ತಾನು ಮತ್ತೊಂದು ಅವಧಿಗೆ ಲೋಕಾಯುಕ್ತರಾಗಿ ಮುಂದುವರಿಯಲು ಸರಕಾರ ಖಂಡಿತಾ ಬಯಸುವುದಿಲ್ಲ. ಹಾಗೊಂದು ವೇಳೆ ಬಯಸಿದರೂ ಲೋಕಾಯುಕ್ತರಾಗಿ ಮುಂದುವರಿಯುವ ಇಚ್ಛೆ ತಮಗಿಲ್ಲ ಎಂದು ಹೇಳಿದರು.

ತಾನು ಈಗ ಮಾಡುತ್ತಿರುವ ಗತಿಯಲ್ಲೇ ಮುಂದೆಯೂ ಕೆಲಸ ಮಾಡುವುದು ಕಷ್ಟ. ತಮ್ಮೊಂದಿಗಿದ್ದ ಅಧಿಕಾರಿಗಳು ವರ್ಗಾವಣೆ ಆಗುತ್ತಿದ್ದಾರೆ. ಹೊಸಬರು ಬರುತ್ತಾರೆ ಎನ್ನುವ ಮೂಲಕ ಲೋಕಾಯುಕ್ತರಾಗಿ ಎರಡನೇ ಅವಧಿಗೆ ಮುಂದುವರಿದರೂ ಸರಕಾರ ತಮ್ಮ ಕೈ ಕಟ್ಟಿ ಹಾಕಬಹುದು ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಮಾರ್ಚ್ ಅಂತ್ಯದೊಳಗೆ ವರದಿ ನೀಡುವುದಾಗಿ ಹೆಗ್ಡೆ ಈ ಸಂದರ್ಭದಲ್ಲಿ ಹೇಳಿದರು.
ಇವನ್ನೂ ಓದಿ