ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಚ್‌ಡಿಕೆ ರಾಜ್ಯ ರಾಜಕೀಯದ ದೊಡ್ಡ ಶಕುನಿ: ವಿಶ್ವನಾಥ್ ಕಿಡಿ (Kumaraswamy | Vishwanath | BJP | Congress | Mysore | Deve gowda)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಿಡಿಕಾರಿರುವ ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್, ಇಬ್ಬರೂ ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ರಾಜ್ಯರಾಜಕಾರಣದಲ್ಲಿ ದೊಡ್ಡ ಶಕುನಿಯಾಗಿ ಕಾಡುತ್ತಿದ್ದಾರೆ. ರಾಜ್ಯ ರಾಜಕೀಯದಲ್ಲಿ ತಾನೊಬ್ಬನೇ ಮಹಾನ್ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಕುಮಾರಸ್ವಾಮಿ 16 ಜನ ಶಾಸಕರ ಮನೆ ಹಾಳು ಮಾಡಿರುವುದಾಗಿ ಆರೋಪಿಸಿದರು.

ಜಾತ್ಯತೀತೆಯ ಮುಖವಾಡ ಹಾಕಿಕೊಂಡಿರುವ ಅಪ್ಪ-ಮಕ್ಕಳು ಸ್ವಾರ್ಥದ ರಾಜಕೀಯಕ್ಕೆ ಶಕುನಿ ಆಟ ಆಡುತ್ತಿದ್ದಾರೆ. ಅಷ್ಟೇ ಅಲ್ಲ ರಾಜ್ಯಕ್ಕೆ ತನ್ನ ನಾಯಕತ್ವ ಅನಿರ್ವಾತೆ ಇದೆ ಎಂಬಂತೆ ತೋರಿಸುತ್ತಿರುವ ಕುಮಾರಸ್ವಾಮಿ ಕಪಟ ನಾಯಕ ಎಂದು ವ್ಯಂಗ್ಯವಾಡಿದರು.

ಈಗಾಗಲೇ ಕಾಂಗ್ರೆಸ್‌ನ ಧರಂಸಿಂಗ್, ಬಿ.ಎಸ್.ಯಡಿಯೂರಪ್ಪನವರಿಗೆ ಕೈಕೊಟ್ಟವರು ಯಾರು ಸ್ವಾಮಿ?ಸಿದ್ದರಾಮಯ್ಯನವರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಯಾರು ಎಂದು ಖಾರವಾಗಿ ಪ್ರಶ್ನಿಸಿರುವ ವಿಶ್ವನಾಥ್, ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಸುಮಾರು 16 ಮಂದಿ ಶಾಸಕರ ಮನೆ ಹಾಳು ಮಾಡಿರುವ ಕುಮಾರಸ್ವಾಮಿ ಅವರೆಲ್ಲರ ಭವಿಷ್ಯವನ್ನೇ ಹಾಳು ಮಾಡಿದರು. ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಮೈಸೂರಿನಲ್ಲಿ ಕೋಮುವಾದಿ ಬಿಜೆಪಿ ಪಕ್ಷದ ಜತೆ ಕೈಜೋಡಿಸುವ ಮೂಲಕ ತನ್ನ ನಿಜಬಣ್ಣವನ್ನು ಬಯಲುಮಾಡಿದೆ ಎಂದರು.
ಇವನ್ನೂ ಓದಿ