ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿ.ಎಸ್. ಆಚಾರ್ಯ ಬಣ್ಣ ಬಯಲು ಮಾಡ್ತೇನೆ: ಎಚ್‌ಡಿಕೆ (VS Acharya | HD Kumaraswamy | Karnataka | BJP)
ಕರ್ನಾಟಕದ ಆಡಳಿತ ಪಕ್ಷ, ಪ್ರತಿಪಕ್ಷಗಳ ಮುಖಂಡರು ಬಣ್ಣ ಬಯಲು ಮಾಡೋದು, ಬಿಚ್ಚೋದು ಮುಂತಾದ ಚಿಲ್ಲರೆ ರಾಜಕೀಯದಲ್ಲೇ ಮುಳುಗಿ ಹೋಗಿದ್ದಾರೆ. ಪ್ರತಿದಿನ ಒಬ್ಬರಲ್ಲೊಬ್ಬರು ಇನ್ನೊಬ್ಬರ ಅಕ್ರಮಗಳನ್ನು ಬಹಿರಂಗ ಮಾಡುತ್ತೇನೆ ಎಂದು ಹೇಳುತ್ತಾರೆಯೇ ಹೊರತು, ಬಣ್ಣ ಮಾತ್ರ ಬಯಲಾಗುತ್ತಿಲ್ಲ. ಇದಕ್ಕೆ ಇತ್ತೀಚಿನ ಸೇರ್ಪಡೆ ಎಚ್.ಡಿ. ಕುಮಾರಸ್ವಾಮಿ.

ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮತ್ತು ಇತರರ ಅಕ್ರಮಗಳನ್ನು ಬಯಲು ಮಾಡುತ್ತೇನೆ ಎಂದು ಹೇಳುತ್ತಾ ಬಂದವರು. ಈ ಬಾರಿ ಅವರ ಕಣ್ಣು ಬಿದ್ದಿರುವುದು ಸಚಿವ ವಿ.ಎಸ್. ಆಚಾರ್ಯ ಮೇಲೆ. ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎರಡು ದಿನಗಳಲ್ಲಿ ಸಾಕ್ಷಿ ಸಮೇತ ದಾಖಲೆ ಬಹಿರಂಗ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.

ಆಚಾರ್ಯ ಮಾತೆತ್ತಿದರೆ ಅಹಿಂಸೆ, ಸೌಹಾರ್ದತೆ ಬಗ್ಗೆ ಮಾತನಾಡುತ್ತಾರೆ. ಅವರು ಹಿಂಸೆ ಮತ್ತು ಕೋಮುವಾದಕ್ಕೆ ಯಾವ ರೀತಿಯಲ್ಲಿ ಪ್ರಚೋದನೆ ನೀಡಿದ್ದಾರೆ ಮತ್ತು ಅದಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ನನಗೆ ಗೊತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು. ಅವರ ದ್ವಂದ್ವ ನೀತಿ ಬಗ್ಗೆ ದಾಖಲೆಗಳನ್ನೇ ನಿಮ್ಮ ಮುಂದಿಡಲಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ತಿಳಿಸಿದರು.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಆಚಾರ್ಯ ಅಹಿಂಸೆ ಮತ್ತು ಸೌಹಾರ್ದತೆ ಬಗ್ಗೆ ಚರ್ಚೆ ಮಾಡಿದ್ದರು. ಇದನ್ನೇ ಉಲ್ಲೇಖಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರ ನಿಜಬಣ್ಣವನ್ನು ಬಯಲು ಮಾಡುತ್ತೇನೆ ಎಂದರು.
ಇವನ್ನೂ ಓದಿ