ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಬಿಎಸ್‌ವೈರಿಂದ ಚೊಚ್ಚಲ ಕೃಷಿ ಬಜೆಟ್: ಕೊಡುಗೆಗಳ ಸುರಿಮಳೆ (Agriculture budget 2011 | State budget 2011 | BJP | Yeddyurappa | Karnataka)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇಶದಲ್ಲಿಯೇ ಪ್ರಥಮ ಬಾರಿಗೆ, ರಾಜ್ಯದ 17,857 ಕೋಟಿ ರೂ.ಗಳ ಕೃಷಿ ಬಜೆಟ್ ಅನ್ನು ಗುರುವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಮಂಡಿಸುವುದರೊಂದಿಗೆ ಪ್ರಸಕ್ತ 2011-12ರ ಸಾಲಿಗೆ ರಾಜ್ಯದ ರೈತರಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.

ರೇಸ್‌ಕೋರ್ಸ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಸುಮಾರು ಐದು ಸಾವಿರ ರೈತರೊಂದಿಗೆ ಸಿಎಂ ಚಾಲುಕ್ಯ ವೃತ್ತದವರೆಗೆ ಮೆರವಣಿಗೆ ನಡೆಸಿದರು. ರಾಷ್ಟ್ರಕವಿ ಕುವೆಂಪು ರಚಿತ ರೈತ ಗೀತೆ ನೇಗಿಲಯೋಗಿ ಹಾಡುವ ಮೂಲಕ ಮೆರವಣಿಗೆ ಆರಂಭವಾಗಿತ್ತು. ಕೈಯಲ್ಲಿ ಕೆಂಪುಬಣ್ಣದ ಸೂಟ್‌ಕೇಸ್ ಹಿಡಿದು ಸಿಎಂ ವಿಧಾನಸೌಧ ಪ್ರವೇಶಿಸಿದ್ದರು. ನಂತರ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಜೆಡಿಎಸ್‌ನ ಎಚ್.ಡಿ.ರೇವಣ್ಣ ಸೇರಿದಂತೆ ಹಲವು ಮುಖಂಡರ ಕೈಕುಲುಕಿ, ಬಜೆಟ್ ಭಾಷಣ ಆರಂಭಿಸಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೃಷಿ ಬಜೆಟ್‌ ಮಂಡನೆಗೆ ಅನುಮೋದನೆ ಪಡೆದರು.

ನಮ್ಮ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನೆಲ, ಜಲಕ್ಕೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮುಂದಾಗಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ರೈತರ ಕ್ಷೇಮಕ್ಕಾಗಿ ಸರಕಾರ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಬದ್ದವಾಗಿದೆ ಎಂದರು. ಸಣ್ಣ, ಅತಿ ಸಣ್ಣ ರೈತರಿಗೆ ಸೂಕ್ತ ನೆರವು ನೀಡುವುದಾಗಿ ಹೇಳಿದರು.

ಬಜೆಟ್ ಮುಖ್ಯಾಂಶಗಳು:
ಜೈವಿಕ ಇಂಧನ ಪ್ರೋತ್ಸಾಹಕ್ಕೆ
ಶೇ.1ರ ಬಡ್ಡಿ ದರದಲ್ಲಿ ಕೃಷಿ ಸಾಲ,
ನೀರಾವರಿ ವಲಯಕ್ಕೆ 7,800 ಕೋಟಿ ರೂ.ಅನುದಾನ
ಭೂ ಚೇತನ ಕಾರ್ಯಕ್ರಮ 30 ಜಿಲ್ಲೆಗಳ ವಿಸ್ತರಣೆಗೆ 40 ಕೋಟಿ ರೂ.
ಕೃಷಿ ಯಂತ್ರ ಸಹಾಯಧನ 100 ಕೋಟಿ ರೂ.
ಕೃಷಿ ವಾಣಿಜ್ಯ ಅಭಿವೃದ್ಧಿ ನೀತಿ ಯೋಜನೆ,
ಕೃಷಿ ಆವರ್ತನಿಧಿ 1000 ಕೋಟಿ ರೂ.ಹೆಚ್ಚಳ
ನೀರಾವರಿ ಪಂಪ್‌ಸೆಟ್‌ಗೆ ಗುಣಮಟ್ಟದ ವಿದ್ಯುತ್
ಗುಣಮಟ್ಟದ ಬೀಜಕ್ಕೆ 60 ಕೋಟಿ ರೂ.
ಸಹಕಾರಿ ಸಂಘದ ಮೂಲಕ ಕೃಷಿ ಸಾಲ
ಜೈವಿಕ ಇಂಧನಕ್ಕೆ 125 ಕೋಟಿ ರೂ.
10 ಲಕ್ಷ ರೈತರ ಕುಟುಂಬ ಅಭಿವೃದ್ಧಿಗೆ ಸುವರ್ಣ ಭೂಮಿ ಯೋಜನೆ ಅನುಷ್ಠಾನಕ್ಕೆ 1ಸಾವಿರ ಕೋಟಿ ರೂ.
ಪ್ರತಿ ರೈತ ಕುಟುಂಬಕ್ಕೆ 10 ಸಾವಿರ ರೂ. ಪ್ರೋತ್ಸಾಹ ಧನ
ಗುಣಮಟ್ಟದ ವಿದ್ಯುತ್‌ಗೆ 3900 ಕೋಟಿ ರೂ.
ಕೆರೆ ಪುನರುಜ್ಜೀವನಕ್ಕೆ 1000 ಕೋಟಿ ರೂ.
ಪಂಪ್‌ಸೆಟ್ ಸಕ್ರಮಕ್ಕೆ 100 ಕೋಟಿ ರೂ.
ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಬಡ್ಡಿರಹಿತ ಸಾಲದ ಯೋಜನೆ.
ಕೃಷಿ ಮತ್ತು ಕೃಷಿಯೇತರ ಯೋಜನೆಗೆ ಮೂಲಕ ಸೌಕರ್ಯ
ಸಣ್ಣ ಬಂದರುಗಳ ನಿರ್ಮಾಣಕ್ಕೆ 100 ಕೋಟಿ ರೂ.
ಪುಷ್ಪೋದ್ಯಮ ಅಭಿವೃದ್ದಿಗೆ 10 ಕೋಟಿ ರೂ.
2011-2020ರ ದಶಕವನ್ನು ನೀರಾವರಿ ದಶಕವೆಂದು ಘೋಷಣೆ
1 ಲಕ್ಷ ಅಕ್ರಮ ಪಂಪ್‌ಸೆಟ್ ಸಕ್ರಮಕ್ಕೆ 100 ಕೋಟಿ ರೂ.
ಗ್ರಾಮೀಣ ಪ್ರದೇಶದ ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹ
50 ಮೀನು ಮಾರುಕಟ್ಟೆ ಸ್ಥಾಪನೆಗೆ 5 ಕೋಟಿ ರೂ.
ಜೇನು ಸಾಕಾಣಿಕೆ ಮಾಡುವವರಿಗೆ ಪ್ರೋತ್ಸಾಹ ಧನ
ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 1,077 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 2399 ಕೋಟಿ
ನಗರಾಭಿವೃದ್ಧಿ ಇಲಾಖೆಗೆ 7,710 ಕೋಟಿ ರೂ.
ಕೃಷಿ, ತೋಟಗಾರಿಕೆ, ಮೀನುಗಾರಿಕೆ ಡಿಫ್ಲೋಮಾ
4 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ
ಪ್ರತಿ ವಿದ್ಯಾರ್ಥಿಗೆ 1000 ರೂ.ಶಿಷ್ಯವೇತನ
ಹೆಚ್ಚುವರಿ ಬೀಜೋತ್ಪಾದನೆಗೆ 5 ಕೋಟಿ ರೂ.
ಹಿಂದುಳಿದ ಪ್ರದೇಶ ಅಭಿವೃದ್ಧಿಗೆ ಯೋಜನೆ.
ಹಸಿರು ಹೊನ್ನು, ಬರಡು ಬಂಗಾರ ಯೋಜನೆ
ಗಣಕೀಕೃತ ಸಾರ್ವಜನಿಕ ಸೇವಾ ಕೇಂದ್ರ
ಜೂನ್‌ನಲ್ಲಿ ಜಾಗತಿಕ ಕೃಷಿ ಬಂಡವಾಳ ಸಮಾವೇಶ
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1,457 ಕೋಟಿ ರೂ.
ಜಲಸಂಪನ್ಮೂಲ ಇಲಾಖೆಗೆ 7,800 ಕೋಟಿ ರೂ.
ಇಂಧನ ಇಲಾಖೆಗೆ 8,523 ಕೋಟಿ ರೂ.
ಸಮಾಜ ಕಲ್ಯಾಣ ಅಭಿವೃದ್ಧಿಗೆ 3,264 ಕೋಟಿ ರೂ.
ಶಿಕ್ಷಣ ಇಲಾಖೆಗೆ 12,284 ಕೋಟಿ ರೂ.
ಒಳಾಡಳಿತ ಮತ್ತು ಸಾರಿಗೆ 3,062 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ 2,399 ಕೋಟಿ ರೂ.
ವಸತಿ ಇಲಾಖೆಗೆ 1,194 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆಗೆ 7,710 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 3,254 ಕೋಟಿ ರೂ.
ರಾಜ್ಯದಲ್ಲಿ ತೆಂಗು ಬೆಳೆ ಉತ್ಪಾದನೆಗೆ 25 ಕೋಟಿ ರೂ.
ರೈತರ ಹೋರಾಟಕ್ಕೆ ಹೊಸ ಚೈತನ್ಯ ತುಂಬಿದ ದಿ.ಪ್ರೊ.ನಂಜುಂಡಸ್ವಾಮಿಗೆ ಕೃಷಿ ರತ್ನ ಪ್ರಶಸ್ತಿ.
ಅವರ ಪ್ರತಿಷ್ಠಾನಕ್ಕೆ 10 ಲಕ್ಷ ರೂ.ಅನುದಾನ
ತೀರ್ಥಹಳ್ಳಿ ಪುರುಷೋತ್ತಮ ಅವರಿಗೆ ಸಾವಯವ ಕೃಷಿ ರತ್ನ ಪ್ರಶಸ್ತಿ,
ಅವರ ಪ್ರತಿಷ್ಠಾನಕ್ಕೆ 10 ಲಕ್ಷ ರೂ. ಅನುದಾನ ನೀಡಿಕೆ.
ಬಂಟ್ವಾಳದಲ್ಲಿ ನೀರಾ ಸಂಸ್ಕರಣಾ ಘಟಕ
ಭೂ ದಾಖಲೆಗಳ ನವೀಕರಣಕ್ಕೆ ವಿಶೇಷ ಒತ್ತು
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ
ಉಗ್ರಾಣಗಳ ನಿರ್ಮಾಣಕ್ಕೆ 100 ಕೋಟಿ ರೂ.
ಇವನ್ನೂ ಓದಿ