ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಜೆಟ್: ಟೋಪಿ ಹಾಕಿಸಿಕೊಳ್ಳೋದು ಸುಲಭ, ಚಿನ್ನ ದುಬಾರಿ! (Agriculture budget 2011 | Karnataka State budget 2011 | BJP | Yeddyurappa | Budget 2011 Highlight)
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಮಂಡಿಸಿದ, 2011-12 ಸಾಲಿನ ಕೃಷಿ ಮತ್ತು ಸಾಮಾನ್ಯ ಆಯವ್ಯಯ ಪತ್ರದಲ್ಲಿ ಉಲ್ಲೇಖವಾಗಿರುವಂತೆ ತೆಂಗಿನಕಾಯಿ, ಶಾಲಾ ಚೀಲ, ಅಡುಗೆ ಪಾತ್ರೆಗಳು ಅಗ್ಗವಾಗಿದ್ದರೆ, ಚಿನ್ನ ಮತ್ತಷ್ಟು ದುಬಾರಿಯಾಗಿದೆ, ವಾಹನಗಳಿಗೂ ತೆರಿಗೆ ಏರಿಕೆಯಾಗಿದೆ.

ತೆಂಗಿನ ಕಾಯಿ, ಅಡುಗೆ ಪಾತ್ರೆ, ಟೋಪಿ ಅಗ್
* ಭತ್ತ, ಅಕ್ಕಿ, ಗೋಧಿ, ಬೇಳೆ ಕಾಳುಗಳು ಹಾಗೂ ಅಕ್ಕಿ-ಗೋಧಿಯ ಪದಾರ್ಥಗಳ ಮೇಲಿನ ತೆರಿಗೆ ವಿನಾಯಿತಿ ಇನ್ನೊಂದು ವರ್ಷಕ್ಕೆ ಮುಂದುವರಿಕೆ
* ತೆಂಗಿನ ಕಾಯಿಗೆ ತೆರಿಗೆಯಿಂದ ವಿನಾಯಿತಿ (ಕೊಬ್ಬರಿಗೆ ಅಲ್ಲ)
* ಮುಳ್ಳುತಂತಿ ತೆರಿಗೆ ಶೇ.13.5ರಿಂದ ಶೇ.5ಕ್ಕೆ ಇಳಿಕೆ
* ಎಣ್ಣೆ ತೆಗೆದ ಅಕ್ಕಿ ಹೊಟ್ಟಿಗೆ ತೆರಿಗೆ ವಿನಾಯಿತಿ
* 500 ರೂ. ಒಳಗಿನ ಶಾಲಾ ಕೈಚೀಲಗಳಿಗೆ ಶೇ.5 ತೆರಿಗೆ ವಿನಾಯಿತಿ
* ಅಡುಗೆ ಪಾತ್ರೆಗಳ ತೆರಿಗೆ ಶೇ.13.5ರಿಂದ ಶೇ.5ಕ್ಕೆ ಇಳಿಕೆ
* ಟೋಪಿಗಳ ಮೇಲೆ 13.5ರಿಂದ ಶೇ.5ಕ್ಕೆ ಇಳಿಕೆ
* ಸಿನಿಮಾ ಲೀಸಿಂಗ್ ಮತ್ತು ಅದಕ್ಕೆ ಸಂಬಂಧಿಸಿದ ಕೃತಿಸ್ವಾಮ್ಯಗಳ ಮಾರಾಟಕ್ಕೆ ತೆರಿಗೆ ವಿನಾಯಿತಿ

ಚಿನ್ನ, ವಾಹನ ತೆರಿಗೆ ದುಬಾರಿ
* ಬಂಗಾರ ಮತ್ತಿತರ ಅಮೂಲ್ಯ ಲೋಹದ ಆಭರಣಗಳು, ಹರಳುಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ಶೇ.1ರಿಂದ ಶೇ.2ಕ್ಕೇರಿಕೆ
* ವಾಹನಗಳ ಮೇಲಿನ ಶೇ.10 ಇದ್ದ ಮೇಲ್ತೆರಿಗೆ, ಶೇ.11ಕ್ಕೆ ಏರಿಕೆ.
ಇವನ್ನೂ ಓದಿ