2011 ರಾಜ್ಯ ಬಜೆಟ್: ಗ್ರಾಮೀಣಾಭಿವೃದ್ಧಿ, ನಗರಕ್ಕೆ ಒತ್ತು...
ಬೆಂಗಳೂರು, ಗುರುವಾರ, 24 ಫೆಬ್ರವರಿ 2011( 15:39 IST )
PTI
ಪ್ರಸಕ್ತ 2011-12ನೇ ಸಾಲಿನ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗುರುವಾರ ದೇಶದಲ್ಲಿ ಮೊದಲ ಬಾರಿಗೆ ಎಂಬಂತೆ ಕೃಷಿ ಬಜೆಟ್ ಮಂಡಿಸಿದ ಬೆನ್ನಲ್ಲೇ ಸಾಮಾನ್ಯ ಬಜೆಟ್ ಮಂಡಿಸಿದರು.
2011-12ರ ಸಾಲಿನ ಒಟ್ಟು ಜಮೆ 83,729 ಕೋಟಿ ರೂ.ನಿರೀಕ್ಷೆ ಇದ್ದು, ಇದರಲ್ಲಿ 66,313 ಕೋಟಿ, ರಾಜಸ್ವ ಜಮೆ ಹಾಗೂ 17,416 ಕೋಟಿ ಬಂಡವಾಳ ಜಮೆ ಸೇರಿದೆ. ಹಾಗೆಯೇ 85,319 ಕೋಟಿ ರೂ.ಒಟ್ಟು ವೆಚ್ಚವೆಂದು ಅಂದಾಜಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಒಟ್ಟು 67,792 ಕೋಟಿ ರೂ. ಹಣವನ್ನು ಹೂಡಿಕೆ ಮಾಡಲಾಗಿದೆ. ಇದಕ್ಕಾಗಿ 91 ಯೋಜನೆಗಳನ್ನು ರೂಪಿಸಲಾಗಿದೆ.
ಗುಲ್ಬರ್ಗಾ ವಿಘ್ನೇಶ್ವರ ಲಾ ಕಾಲೇಜಿಗೆ 1 ಕೋಟಿ ರೂ. ಬೆಂಗಳೂರು ವಕೀಲರ ಸಂಘದ ಕಟ್ಟಡಕ್ಕೆ 1 ಕೋಟಿ ಬೆಂಗಳೂರು ಬಾರ್ ಕೌನ್ಸಿಲ್ ಕಟ್ಟಡಕ್ಕೆ 2 ಕೋಟಿ ನೆಲಮಂಗಲದವರೆಗೆ ಲೋಕಲ್ ರೈಲು ನ್ಯಾಯಾಲಯ ಮೂಲ ಸೌಕರ್ಯಕ್ಕೆ 27 ಕೋಟಿ ಬಾರ್ ಅಸೋಸಿಯೇಷನ್‌ಗೆ ಜೆರಾಕ್ಸ್ ಯಂತ್ರ ಜೈಲು ಭದ್ರತಾ ಉಪಕರಣಗಳಿಗೆ 8 ಕೋಟಿ 1060 ಸಿಬ್ಬಂದಿ ಕೈಗಾರಿಕಾ ಭದ್ರತಾ ಪಡೆ ರಚನೆ ಪೊಲೀಸ್ ಠಾಣೆ ಕಾಮಗಾರಿಗಳಿಗೆ 25 ಕೋಟಿ ಬಿಬಿಎಂಪಿಯಲ್ಲಿ ಯೋಜನಾ ನಿರ್ವಹಣಾ ಘಟಕ ಖಾಸಗಿ ಸಹಭಾಗಿತ್ವದಲ್ಲಿ 4 ಬೃಹತ್ ಆಸ್ಪತ್ರೆ ಬೆಂಗಳೂರಿಗೆ 4770 ಕೋಟಿ ರೂ. 1ನೇ ಹಂತದ ಮೆಟ್ರೋಗೆ 630 ಕೋಟಿ ಹೆಬ್ಬಾಳ-ಜೆಪಿ ನಗರ ಮಾನೋ ರೈಲು ಜಲಮಂಡಳಿ ಯೋಜನೆಗೆ 1150 ಕೋಟಿ ರೂ. ಬಿಬಿಎಂಪಿಗೆ 350 ಕೋಟಿ ರೂ. ಮಿನರ್ವ್ ವೃತ್ತ-ಹಡ್ಸನ್ ವೃತ್ತ ಫ್ಲೈ ಓವರ್ ತ್ಯಾಜ್ಯವಸ್ತು ವಿಲೇವಾರಿಗೆ ಒತ್ತು ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರಕ್ಕೆ 150 ಕೋಟಿ ರೂ. ಬಿಸಿನೆಸ್ ಪಾರ್ಕ್‌ಗೆ 5 ಸಾವಿರ ಕೋಟಿ ರಾಷ್ಟ್ರೀಯ ಪಟುಗಳಿಗೆ ತರಬೇತಿ ಭತ್ಯೆ ಆಧುನಿಕ ತರಬೇತಿಗೆ 10 ಕೋಟಿ ಶಿವಮೊಗ್ಗ ಯೋಗ ಕೇಂದ್ರಕ್ಕೆ 25 ಲಕ್ಷ ಶಿರಸಿ ನಿಸರ್ಗ ಟ್ರಸ್ಟ್‌ಗೆ 25 ಲಕ್ಷ ವಿರಾಜಪೇಟೆ ಒಳಾಂಗಣ ಸ್ಟೇಡಿಯಂಗೆ 5 ಕೋಟಿ ಶಿವಮೊಗ್ಗ ಕ್ರೀಡಾ ಸಮುಚ್ಚಯಕ್ಕೆ 10 ಕೋಟಿ ಬಳ್ಳಾರಿ ಕ್ರೀಡಾ ಸಮುಚ್ಛಯಕ್ಕೆ 5 ಕೋಟಿ ಉಚಿತ ಬೈಸಿಕಲ್ ಯೋಜನೆಗೆ 250 ಕೋಟಿ ರೂ.
ನಗರ ಸಾರಿಗೆ ನಿಧಿ: ನಗರ ಸಾರಿಗೆ ವ್ಯವಸ್ಥೆಯನನು ಸುಧಾರಿಸಲು ವಾರ್ಷಿಕ 60 ಕೋಟಿ ರೂ.ಗಳ ಸಹಾಯದೊಂದಿಗೆ ರಾಜ್ಯ ಮಟ್ಟದ ನಗರ ಸಾರಿಗೆ ನಿಧಿಯೊಂದನ್ನು ಸ್ಥಾಪಿಸಲಾಗುವುದು.
ಬೆಂಗಳೂರು ನಗರದ ಅಭಿವೃದ್ಧಿ: ಸುಮಾರು 8ದಶಲಕ್ಷ ಜನಸಂಖ್ಯೆ ಹೊಂದಿರುವ ಬೆಂಗಳೂರು ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಒಂದು ನಗರವಾಗಿದೆ. ನಗರೀಕರಣವು ಸಂಚಾರ ಮತ್ತು ದಟ್ಟಣೆಯಂತಹ ಸಮಸ್ಯೆ ತಂದೊಡ್ಡಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಾರಿಗೆ ಮೂಲ ಸೌಲಭ್ಯಗಳ ಸುಧಾರಣೆ ಮಾಡುವುದು ಮತ್ತು ಉತ್ತಮ ಮಟ್ಟದ ಜೀವನ ಒದಗಿಸುವುದು ಸರಕಾರದ ಪ್ರಯತ್ನವಾಗಿದೆ.
ಗ್ರಾಮೀಣ ಅಭಿವೃದ್ಧಿ: ಗ್ರಾಮೀಣ ಅಭಿವೃದ್ಧಿಗಾಗಿ ಈ ಆಯವ್ಯಯದಲ್ಲಿ ಅನುದಾನವನ್ನು 4,385 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಅನುದಾನ ಕುಡಿಯುವ ನೀರು, ಉದ್ಯೋಗ ಸೃಷ್ಟಿ, ಇತ್ಯಾದಿ ಹಲವಾರು ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ. 2011-12ನೇ ಸಾಲಿನಲ್ಲಿ ಗ್ರಾಮೀಣ ರಸ್ತೆಗಳಿಗಾಗಿ 1000 ಕೋಟಿ ರೂ. ಮತ್ತು ಕುಡಿಯುವ ನೀರಿಗಾಗಿ 1,250 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ.
ಆಸರೆ: ಪ್ರವಾಹ ಪೀಡಿತ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವ ಆಸರೆ ಕಾರ್ಯಕ್ರಮದಡಿ 297 ಗ್ರಾಮಗಳಲ್ಲಿ ಒಟ್ಟು 57,675 ಮನೆಗಳ ಪೈಕಿ 47,626 ಮನೆಗಳ ಕೆಲಸ ಪ್ರಗತಿಯಲ್ಲಿದ್ದು, ಈ ಪೈಕಿ 15,800 ಮನೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಬಾಕಿ 32,400 ಮನೆಗಳನ್ನು 2011 ಮಾರ್ಚ್ ವೇಳೆಗೆ ಪೂರ್ಣಗೊಳಿಸಲಾಗುವುದು. ಬಾಕಿ ಮನೆಗಳನ್ನು 2011ರ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು.
ಅಲ್ಪಸಂಖ್ಯಾತರ ಕಲ್ಯಾಣ: ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಜನರ ಕಲ್ಯಾಣಕ್ಕೆ ಸರಕಾರ ಬದ್ದವಾಗಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 2010-11ನೇ ಸಾಲಿನಲ್ಲಿ 207 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 2011-12ನೇ ಸಾಲಿನಲ್ಲಿ 326 ಕೋಟಿ ರೂ.ಗೆ ಮೀಸಲಿರಿಸಲಾಗಿದೆ.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಮತ್ತು ವಿದ್ಯಾರ್ಥಿನಿಲಯ ಸೌಲಭ್ಯಗಳನ್ನು ಒದಗಿಸುತ್ತಿರುವುದಲ್ಲದೆ, ಭೂಮಿಯ ಖರೀದಿ, ನೀರಾವರಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಮೊದಲಾದ ಯೋಜನೆಗಳಿಗಾಗಿ ಸಾಲ ಮತ್ತು ಸಹಾಯಧನ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಹಜ್‌ಮಹಲ್ ನಿರ್ಮಾಣಕ್ಕಾಗಿ ಈಗಾಗಲೇ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕಟ್ಟಡದ ನಿರ್ಮಾಣಕ್ಕಾಗಿ 5 ಕೋಟಿ ರೂ.ಒದಗಿಸಲಾಗುವುದು. ಕ್ರಿಶ್ಚಿಯನ್ ಪಂಗಡಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಆಯವ್ಯಯದಲ್ಲಿ 50 ಕೋಟಿ ರೂ.ಮೀಸಲಿರಿಸಲಾಗಿದೆ.