ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕರ್ನಾಟಕ ಬಜೆಟ್ 2011-12: ಕನ್ನಡಕ್ಕೆ ಇಷ್ಟು ಕೋಟಿ ಕೋಟಿ! (Agriculture budget 2011 | Karnataka State budget 2011 | BJP | Yeddyurappa | Budget 2011 Highlight)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ 2011-12 ಸಾಲಿನ ಮುಂಗಡ ಪತ್ರದಲ್ಲಿ ಕನ್ನಡ ನಾಡು ನುಡಿಗೆ, ಸಂಸ್ಕೃತಿಗೆ ವಿಶೇಷ ಒತ್ತು ನೀಡಲಾಗಿದೆ. ಬೆಂಗಳೂರಿನಲ್ಲಿ ಕನ್ನಡಾಂಬೆ ಭುವನೇಶ್ವರಿಯ ಪ್ರತಿಮೆ ಸ್ಥಾಪನೆಗೆ 25 ಕೋಟಿ ರೂ, ವಿವಿಧ ಕನ್ನಡ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ 25 ಕೋಟಿ ರೂ. ಅನುದಾನ, ಮೈಸೂರಿನಲ್ಲಿ ದಸರಾವನ್ನು ನಾಡಹಬ್ಬವಾಗಿ ಆಚರಿಸಲು 10 ಕೋಟಿ ರೂ. ಮೀಸಲಿಡಲಾಗಿದೆ.

ವಿದೇಶೀ ವಿವಿಗಳಲ್ಲಿ ಕನ್ನಡ ಪೀಠ...
ಬೆಂಗಳೂರು ಬಳಿ ಬಸವ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ., ವಿದೇಶದಲ್ಲಿರುವ ವೂಜ್‌ಬರ್ಗ್ ವಿವಿ, ಹೈಡೆಲ್‌ಬರ್ಗ್ ವಿವಿ, ಮ್ಯೂನಿಕ್ ವಿವಿ ಮತ್ತು ವಿಯೆನ್ನಾ ವಿವಿಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ತಲಾ 1 ಕೋಟಿ ಮೀಸಲಿಡಲಾಗುತ್ತದೆ.

ಬಸವ, ಕನಕ, ವಾಲ್ಮೀಕಿ ಜಯಂತಿಗೆ ಹಣ...
ಬಸವ, ಕನಕ, ಅಂಬೇಡ್ಕರ್ ಮತ್ತು ವಾಲ್ಮೀಕಿ ಜಯಂತಿಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಚರಿಸಲು ಕ್ರಮವಾಗಿ 50 ಸಾವಿರ ರೂ. ಮತ್ತು 25 ಸಾವಿರ ರೂ. ಒದಗಿಸಲಾಗುತ್ತದೆ.

ಸಾಹಿತ್ಯ ಕ್ಷೇತ್ರಕ್ಕೆ...
ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿಗಾಗಿ 5 ಕೋಟಿ ರೂ. ವೆಚ್ಚದ ಸ್ಮಾರಕ ಭವನ.

ಕನ್ನಡ ಅಶಕ್ತ ಬರಹಗಾರರ ಕೃತಿ ಪ್ರಕಟಣೆಗೆ 5 ಕೋಟಿ ರೂ., ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಗಾಜಿನ ಮನೆ ನಿರ್ಮಾಣಕ್ಕೆ 5 ಕೋಟಿ ರೂ., ಲಂಡನ್‌ನಲ್ಲಿ ಬಸವ ಪುತ್ಥಳಿ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ನೀಡಲಾಗುತ್ತದೆ.

ಕೊಂಕಣಿ ಭಾಷೆಗೆ...
ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ 5 ಕೋಟಿ ರೂ., ನಿಜಲಿಂಗಪ್ಪ ಸ್ಮಾರಕದ ಸಂಶೋಧನಾ ಕಾರ್ಯಗಳಿಗಾಗಿ 5 ಕೋಟಿ, ಹಾಸ್ಯ ನಟ ಟಿ.ಆರ್.ನರಸಿಂಹರಾಜು ಸ್ಮರಣಾರ್ಥ ತಿಪಟೂರಿನಲ್ಲಿ ಕಲಾಮಂದಿರ ನಿರ್ಮಾಣಕ್ಕೆ 1 ಕೋಟಿ.

ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ 1 ಕೋಟಿ ಮತ್ತು ಎರಡು ಬಸ್ ಖರೀದಿಗೆ 50 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.
ಇವನ್ನೂ ಓದಿ