ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೈತರ ನಂಬಿಕೆ ಹುಸಿ ಮಾಡಲ್ಲ-ಸುಮ್ಮನೆ ಟೀಕಿಸ್ಬೇಡಿ: ಸಿಎಂ (BJP | Yeddyurappa | State budget 2011 | Agriculture budget | Karnataka)
NRB
'ಮುಂದಿನ ಬಜೆಟ್ ಗಾತ್ರ 1 ಲಕ್ಷ ಕೋಟಿ ಆಗಲಿದೆ. ಆದರೆ ನನ್ನನ್ನು ಅನಾವಶ್ಯಕವಾಗಿ ಟೀಕಿಸಬೇಡಿ. ರಾಜ್ಯದ ಘನತೆಗೆ ಧಕ್ಕೆ ತರಬೇಡಿ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಮನವಿ ಮಾಡಿಕೊಂಡು ಅಂಕಿ-ಅಂಶಗಳ ಸಹಿತ ಚರ್ಚೆಗೆ ಬನ್ನಿ ಎಂದು ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಕೃಷಿ ಹಾಗೂ ಸಾಮಾನ್ಯ ಬಜೆಟ್ ಮಂಡಿಸಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಣಕಾಸು ನಿರ್ವಹಣೆಯಲ್ಲಿ ರಾಜ್ಯ ನಂ.1 ಸ್ಥಾನದಲ್ಲಿದೆ. ಬಜೆಟ್ ಅಂಶಗಳನ್ನು ಜಾರಿಗೆ ತರಲು ಸರಕಾರ ಬದ್ಧವಾಗಿದ್ದು, ಇದು ಚುನಾವಣಾ ಗಿಮಿಕ್ ಬಜೆಟ್ ಅಲ್ಲ ಎಂದು ಪ್ರತಿಪಕ್ಷಗಳ ಟೀಕೆ ಕುರಿತಂತೆ ಸ್ಪಷ್ಟನೆ ನೀಡಿದರು.

ರಾಜ್ಯದ ಸುಧಾರಣೆಗೆ ಏನೇ ಅಭಿವೃದ್ಧಿ ಕಾರ್ಯ ಕೈಗೊಂಡರೂ ವಿಪಕ್ಷಗಳು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿವೆ. ಹಾಗಾಗಿ ವಿಪಕ್ಷಗಳಿಗೆ ದೇವರು ಒಳ್ಳೇದು ಮಾಡಲಿ ಎಂದರು.

ರೈತರ ನಂಬಿಕೆ ಹುಸಿ ಮಾಡಲ್ಲ, ರಕ್ತದಲ್ಲಿ ಬರೆದು ಕೊಡುವೆ:
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಮುಗಿಸಿದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಫ್ರೀಡಂ ಪಾರ್ಕ್‌ನಲ್ಲಿನ ಸಾವಯವ ಕೃಷಿ ಸಮಾವೇಶದಲ್ಲಿ ಪಾಲ್ಗೊಂಡು ಚಿತ್ರದುರ್ಗದ ರೈತ ದಂಪತಿಗಳಾದ ಗೋವಿಂದಪ್ಪ ಮತ್ತು ಶಾಂತಮ್ಮ ಅವರಿಗೆ ಕೃಷಿ ಬಜೆಟ್ ಪ್ರತಿ ನೀಡಿದರು.

ನಂತರ ರೈತರನ್ನು ಉದ್ದೇಶಿಸಿ ಮಾತನಾಡುತ್ತ, ಇಂದು ಬೆಳಿಗ್ಗೆ ನನ್ನ ಆರೋಗ್ಯ ಕೆಟ್ಟಿತ್ತು. ಆದರೆ ರೈತರ ಜತೆ ಹೆಜ್ಜೆ ಹಾಕಿದ ಬಳಿಕ ನನ್ನಲ್ಲಿ ಅವ್ಯಕ್ತ ಶಕ್ತಿಯೊಂದು ಆವರಿಸಿತು ಎಂದರು. ಇಂದು ಮಂಡಿಸಿರುವ ಕೃಷಿ ಬಜೆಟ್ ಇಡೀ ದೇಶದಲ್ಲೇ ಮಾದರಿಯಾಗಿದೆ ಎಂದು ಹೇಳಿದರು.

ಬಜೆಟ್ ಯೋಜನೆ ಬಗ್ಗೆ ಕೆಲವೇ ದಿನಗಳಲ್ಲಿ ಸಭೆ ನಡೆಸುತ್ತೇನೆ. ಅಷ್ಟೇ ಅಲ್ಲ ರೈತರ ಹಣ ದಲ್ಲಾಳಿಗಳ ಪಾಲಾಗಬಾರದು ಎಂಬುದು ನನ್ನ ಆಶಯ. ನಾನು ರೈತರ ನಂಬಿಕೆ ಹುಸಿ ಮಾಡಲ್ಲ. ಇದನ್ನು ರಕ್ತದಿಂದ ಬರೆದು ಕೊಡುವೆ ಎಂದು ಆವೇಶದಿಂದ ನುಡಿದರು.
ಇವನ್ನೂ ಓದಿ