ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಐಡಿ ಕಿರುಕುಳ-ವಿಶ್ವದಾದ್ಯಂತ ಧರಣಿ ಮಾಡ್ತೇನೆ: ನಿತ್ಯಾನಂದ (CID | Bidadi ashrama | Nithyananda | Ranjitha | Ramanagar | Police)
PTI
ಸಿಐಡಿ ಪೊಲೀಸರು ಅನಾವಶ್ಯಕವಾಗಿ ಆಶ್ರಮದ ಮೇಲೆ ದಾಳಿ ನಡೆಸಿ ಭಕ್ತರ ಮೇಲೆ ಹಲ್ಲೆ ನಡೆಸಿ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಆರೋಪಿಸಿರುವ ನಿತ್ಯಾನಂದ ಸ್ವಾಮಿ, ಸುಳ್ಳು ಪ್ರಕರಣ ಕೈಬಿಡದಿದ್ರೆ ವಿಶ್ವದಾದ್ಯಂತ ಏಕಕಾಲದಲ್ಲಿ ಧರಣಿ ನಡೆಸುವುದಲ್ಲದೆ, ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಏನಿದು ಮತ್ತೊಂದು ವಿವಾದ?:
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಐಡಿ ಡಿವೈಎಸ್ಪಿ ರಾಮಲಿಂಗಪ್ಪ ಅವರು ತಂಡದೊಂದಿಗೆ ಬಿಡದಿ ಆಶ್ರಮಕ್ಕೆ ಭೇಟಿ ನೀಡಿದಾಗ, ಆಶ್ರಮಕ್ಕೆ ಒಳಪ್ರವೇಶಿಸುವ ಸಂದರ್ಭದಲ್ಲಿ ನಿತ್ಯಾನಂದನ ಭಕ್ತರು ಅಡ್ಡಿಪಡಿಸಿದಾಗ ಮಾತಿನ ಚಕಮಕಿ ನಡೆದಿತ್ತು. ಅಲ್ಲದೇ ಸಿಐಡಿ ಅಧಿಕಾರಿಗಳು ಒಳಪ್ರವೇಶಿಸಲು ಯತ್ನಿಸಿದಾಗ ಅಡ್ಡಿಪಡಿಸಿದಾಗ ಹಲ್ಲೆ ನಡೆಸಿದ್ದಾರೆ ಎಂದು ನಿತ್ಯಾನಂದ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಸಿಐಡಿ ಅಧಿಕಾರಿ ರಾಮಲಿಂಗಪ್ಪ ನನ್ನ ತೇಜೋವಧೆಗೆ ಸಂಚು ನಡೆಸುತ್ತಿದ್ದಾರೆ. ಪದೇ, ಪದೇ ಆಶ್ರಮದ ಮೇಲೆ ದಾಳಿ ನಡೆಸಿ, ಆಶ್ರಮವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನನ್ನಲ್ಲಿ ವೀಡಿಯೋ ರೆಕಾರ್ಡ್ ಇದೆ ಎಂದು ನಿತ್ಯಾನಂದ ತಿಳಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಧಾರ್ಮಿಕ ಗುರುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಲೇಬೇಕಾಗಿದೆ ಎಂದರು.

ಘಟನೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಆಶ್ರಮದ ಮೂವರು ಭಕ್ತರ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಆದರೆ ಸಿಐಡಿ ಅಧಿಕಾರಿಗಳು ಆಶ್ರಮವಾಸಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕೆ ದೂರು ನೀಡಲು ಹೋದಾಗ, ನಮ್ಮ ದೂರನ್ನು ಸ್ವೀಕರಿಸಲು ಪೊಲೀಸಲು ನಿರಾಕರಿಸಿದ್ದಾರೆ ಎಂದು ದೂರಿದರು.

ಸಿಐಡಿ ಡಿವೈಎಸ್ಪಿ ರಾಮಲಿಂಗಪ್ಪ ಪೊಲೀಸ್ ಪವರ್ ತೋರಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ನಮ್ಮ ಮೇಲೆ ಸುಳ್ಳು ದೂರನ್ನು ದಾಖಲಿಸಿದ್ದಾರೆ. ಹಾಗಾಗಿ ಸುಳ್ಳು ಪ್ರಕರಣ ಕೈಬಿಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ ನಿತ್ಯಾನಂದ, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಅಂತೂ ನಟಿ ರಂಜಿತಾ ರಾಸಲೀಲೆ ಪ್ರಕರಣದಲ್ಲಿಯೇ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದ ಕಾಮಿಸ್ವಾಮಿ ನಿತ್ಯಾನಂದ ಇದೀಗ ಸಿಐಡಿ ಮತ್ತು ಪೊಲೀಸರ ಜತೆಗಿನ ಜಂಗೀಕುಸ್ತಿಯೊಂದಿಗೆ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಂತಾಗಿದೆ.
ಇವನ್ನೂ ಓದಿ