ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಚ್‌ಡಿಕೆ ಗೊಬ್ಬರ ಮಾರಿ ರಾಜಕೀಯ ಪ್ರವೇಶ: ವಿಶ್ವನಾಥ್ (Kumaraswamy | Congress | Vishwanath | Mysore | JDS | BJP)
'ನಾನು ವಕೀಲ ವೃತ್ತಿಯಿಂದ ರಾಜಕಾರಣ ಪ್ರವೇಶ ಮಾಡಿದವನು. ಆದರೆ ಎಚ್.ಡಿ.ಕುಮಾರಸ್ವಾಮಿ ಗೊಬ್ಬರ ಮಾರಿ ರಾಜಕಾರಣ ಪ್ರವೇಶ ಮಾಡಿದ್ದು, ಇನ್ನು ಮುಂದಾದರು ಉದ್ದಟತನದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ' ಎಂದು ಸಂಸದ, ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಎಚ್.ವಿಶ್ವನಾಥ್‌ಗೆ ಸಂಸದ ಸ್ಥಾನ ನಾನು ಕೊಟ್ಟ ಭಿಕ್ಷೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಕೇವಲ ಒಬ್ಬ ರಾಜಕಾರಣಿ, ನಾನು ರಾಜಕೀಯ ಮುತ್ಸದ್ಧಿ ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಬಾಯಿಗೆ ಬಂದಂತೆ ಬೀದಿಯಲ್ಲಿ ಮಾತನಾಡುತ್ತಾರೆ. ಅಂತಹವರಿಂದ ನೀತಿ ಪಾಠ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ನನಗಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ನಾನು ಜನರಿಂದ ಆಯ್ಕೆಯಾಗಿದ್ದೇನೆ ಹೊರತು, ಕುಮಾರಸ್ವಾಮಿ ಭಿಕ್ಷಿಯಿಂದ ಅಲ್ಲ ಎಂದು ತಿಳಿಸಿದ್ದಾರೆ.

ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬದವರ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ನಾನು ಮುಂದಿನ ದಿನಗಳಲ್ಲಿ ವಿಶ್ವನಾಥ್‌ಗೆ ಶಕುನಿಯಂತೆ ಕಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ತದನಂತರ, ಕುಮಾರಸ್ವಾಮಿ ನನಗೆ ಮಾತ್ರವಲ್ಲ, ಇಡೀ ರಾಜ್ಯದ ಜನತೆಗೆ ಕುಮಾರಸ್ವಾಮಿ ಶಕುನಿಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದರು.

2005ರಲ್ಲಿ ಧರಂಸಿಂಗ್ ಅವರಿಗೆ ಮೋಸ, 2007ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೋಸ, 2010ರಲ್ಲಿ 16 ಮಂದಿ ಶಾಸಕರ ಮನೆ ಹಾಳು ಮಾಡಿದವರು ಯಾರು ಎಂದು ವಿಶ್ವನಾಥ್ ಖಾರವಾಗಿ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇವನ್ನೂ ಓದಿ