ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದಲ್ಲೂ 19 ಕ್ಷೇತ್ರಗಳಿಗೆ ಚುನಾವಣೆ: ಸ್ಪೀಕರ್ ವರದಿ (Karnataka by election | BJP | Congress | KG bopayya | election commission)
ಅನರ್ಹ ಶಾಸಕರ ಪ್ರಕರಣದ ಕಾನೂನು ಸಮರ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದು, ಏತನ್ಮಧ್ಯೆ ಅನರ್ಹ ಶಾಸಕರ ಕ್ಷೇತ್ರಗಳು ಖಾಲಿ ಇರುವ 19 ಕ್ಷೇತ್ರಗಳ ಕುರಿತು ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲೇ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್‌ನ ಇಬ್ಬರು, ಜೆಡಿಎಸ್‌ನ 1 ಶಾಸಕರ ರಾಜೀನಾಮೆಯಿಂದ ತೆರವಾದ ಮೂರು ಸ್ಥಾನ ಹಾಗೂ ಶಾಸಕರ ಅನರ್ಹತೆಯಿಂದ ತೆರವಾದ 16 ಕ್ಷೇತ್ರ ಸೇರಿದಂತೆ ಒಟ್ಟು 19 ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಸ್ಪೀಕರ್ ಕೆಜಿ ಬೋಪಯ್ಯ ಅವರು ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮರು ಚುನಾವಣೆ ನಡೆಸುವ ಕುರಿತು ಕೇಂದ್ರ ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳಲಿದೆ.

ಖಾಲಿಯಾದ ಕ್ಷೇತ್ರಗಳ ಕುರಿತು ಚುನಾವಣೆ ಆಯೋಗಕ್ಕೆ ಸ್ಪೀಕರ್ ತಿಂಗಳಿಗೊಮ್ಮೆ ವರದಿ ನೀಡಬೇಕು. ಖಾಲಿ ಕ್ಷೇತ್ರಗಳಿಗೆ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು.

ಅಲ್ಲದೇ ಖಾಲಿ ಇರುವ ವಿಧಾನಸಭೆ ಕ್ಷೇತ್ರಗಳ ಕುರಿತು ಸ್ಪೀಕರ್ ಅವರಿಂದ ಬಂದ ವರದಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ. ಮರು ಚುನಾವಣೆ ಸಂಬಂಧ ಕೇಂದ್ರ ಚುನಾವಣೆ ಆಯೋಗ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸುರಂಜನ್ ತಿಳಿಸಿದ್ದಾರೆ.

ಚುನಾವಣೆ ನಡೆಸಬಹುದೇ?: ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯದ ಕಟಕಟೆಯಲ್ಲಿರುವಾಗಲೇ ಚುನಾವಣೆ ನಡೆಸಬಹುದೇ ಎಂಬುದು ಸದ್ಯದ ಪ್ರಶ್ನೆ. ಆದರೆ ಪ್ರಕರಣದ ವಿಚಾರಣೆ ಹಂತದಲ್ಲಿಯೇ ಚುನಾವಣೆ ನಡೆಸುವುದಕ್ಕೆ ತಡೆಯಾಜ್ಞೆ ನೀಡಬೇಕೆಂದು ಅನರ್ಹರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಂತಹ ಸಂದರ್ಭದಲ್ಲಿ ಕೋರ್ಟ್ ಚುನಾವಣೆ ನಡೆಸದಂತೆ ಆಯೋಗಕ್ಕೆ ಸೂಚಿಸಿದರೆ ಮಾತ್ರ ಚುನಾವಣೆ ನಡೆಸಲು ಸಾಧ್ಯವಿಲ್ಲ. ಏತನ್ಮಧ್ಯೆ ಅನರ್ಹರು ಈ ವಿಚಾರದಲ್ಲಿ ಇನ್ನೂ ತಡೆಯಾಜ್ಞೆ ಕೋರಿಲ್ಲ. ಹೀಗಾಗಿ ಆಯೋಗಕ್ಕೆ ಚುನಾವಣೆ ನಡೆಸಲು ಯಾವುದೇ ಅಡ್ಡಿ ಇಲ್ಲ ಎನ್ನಲಾಗಿದೆ.

ಬಿಜೆಪಿ ಸಿದ್ದತೆ: ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡಿರುವ ಆಡಳಿತಾರೂಢ ಬಿಜೆಪಿ 19 ಸ್ಥಾನಗಳ ಚುನಾವಣೆಗೆ ಸಿದ್ದತೆ ನಡೆಸಿದೆ. ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ದ ಮಾಡಿಕೊಂಡಿದ್ದು, ಪ್ರತಿ ಕ್ಷೇತ್ರಕ್ಕೆ ತಲಾ ಇಬ್ಬರು ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ತಂತ್ರ ರೂಪಿಸುತ್ತಿವೆ.

ಅನರ್ಹತೆಯಿಂದ ಖಾಲಿಯಾದ 16 ಸ್ಥಾನ:
ಮಳವಳ್ಳಿ-ಪಿ.ಎಂ.ನರೇಂದ್ರಸ್ವಾಮಿ
ಚಾಮರಾಜ-ಶಂಕರಲಿಂಗೇಗೌಡ
ನೆಲಮಂಗಲ-ನಾಗರಾಜು
ಕೆಜಿಎಫ್-ವೈ.ಸಂಪಂಗಿ
ಹಿರಿಯೂರು-ಡಿ.ಸುಧಾಕರ್
ಪಾವಗಡ-ವೆಂಕಟಮರಣಪ್ಪ
ಹೊಸದುರ್ಗ-ಗೂಳಿಹಟ್ಟಿ ಶೇಖರ್
ದೇವದುರ್ಗ-ಶಿವನಗೌಡ ನಾಯಕ್
ಕನಕಗಿರಿ-ಶಿವರಾಜ ತಂಗಡಗಿ
ಅರಬಾವಿ-ಬಾಲಚಂದ್ರ ಜಾರಕಿಹೊಳಿ
ಸಾಗರ-ಬೇಳೂರು ಗೋಪಾಲಕೃಷ್ಣ
ಇಂಡಿ-ಸೌರ್ವಭೌಮ ಬಗಲಿ
ಬಸವನ ಬಾಗೇವಾಡಿ-ಎಸ್.ಕೆ.ಬೆಳ್ಳುಬ್ಬಿ
ಕಾಗವಾಡ-ರಾಜು ಕಾಗೆ
ಕಾರವಾರ-ಆನಂದ ಅಸ್ನೋಟಿಕರ್
ಕೊಳ್ಳೇಗಾಲ-ನಂಜುಂಡಸ್ವಾಮಿ

ರಾಜೀನಾಮೆಯಿಂದ ತೆರವಾದ 3 ಸ್ಥಾನ:
ಬಂಗಾರುಪೇಟೆ-ನಾರಾಯಣ ಸ್ವಾಮಿ (ಕಾಂಗ್ರೆಸ್)
ಜಗಳೂರು- ರಾಮಚಂದ್ರ (ಕಾಂಗ್ರೆಸ್)
ಚನ್ನಪಟ್ಟಣ-ಎಂ.ಸಿ.ಅಶ್ವತ್ಥ್ (ಜೆಡಿಎಸ್)
ಇವನ್ನೂ ಓದಿ