ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಓವರ್‌ಟೇಕ್; ಸಚಿವ ಬೆಳಮಗಿ ಪುತ್ರನಿಂದ ಡ್ರೈವರ್ ಮೇಲೆ ಹಲ್ಲೆ! (Revunaik Belamagi | Vasanth | Gulbarga | overtake | assaulted driver,)
ಓವರ್‌ಟೇಕ್; ಸಚಿವ ಬೆಳಮಗಿ ಪುತ್ರನಿಂದ ಡ್ರೈವರ್ ಮೇಲೆ ಹಲ್ಲೆ!
ಗುಲ್ಬರ್ಗಾ, ಬುಧವಾರ, 2 ಮಾರ್ಚ್ 2011( 13:38 IST )
ಶಿಕ್ಷಣ ಸಚಿವ ರೇವೂ ನಾಯಕ್ ಬೆಳಮಗಿ ಕುಸ್ತಿಪಟುವಾಗಿ ಹೆಸರಾದವರು. ಆದರೆ ಅವರ ಕುಸ್ತಿ ಏನೀದ್ದರೂ ಅಖಾಡದಲ್ಲಿ. ಇದಕ್ಕೆ ತದ್ವಿರುದ್ದ ಎಂಬಂತೆ ಸಚಿವರ ಪುತ್ರ ವಸಂತ ತನ್ನ ಕಾರಿಗೆ ದಾರಿ ಬಿಡಲಿಲ್ಲ ಎಂದು ಆಕ್ರೋಶಗೊಂಡು ಸರಕಾರಿ ಬಸ್ ಚಾಲಕನಿಗೆ ಹಿಗ್ಗಾಮುಗ್ಗಾ ಬಡಿದು ಜಂಗೀಕುಸ್ತಿಗಿಳಿದ ಘಟನೆ ಮಂಗಳವಾರ ನಡೆದಿದೆ.
ರಾಜ್ಯ ಈಶಾನ್ಯ ವಾಯು ಸಾರಿಗೆ ಸಂಸ್ಥೆಯ ಬಸ್ ಮಂಗಳವಾರ ರಾತ್ರಿ ಜೇವರ್ಗಿ ಕಾಲೋನಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಊರು ಸುತ್ತುತ್ತಿದ್ದ ಸಚಿವ ಬೆಳಮಗಿ ಪುತ್ರ ವಸಂತನ ಕಾರು ಬರುತ್ತಿತ್ತು. ಬಸ್‌ನ್ನು ಹಿಂದಿಕ್ಕಲು ಓವರ್‌ಟೇಕ್ ಮಾಡಿದರೂ ಚಾಲಕ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲವಾಗಿತ್ತು. ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಬಸ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಆಕ್ರೋಶಗೊಂಡ ವಸಂತ ಬಸ್ ನಿಂತ ಕೂಡಲೇ ಅದನ್ನು ಅಡ್ಡಗಟ್ಟಿ ಕಲ್ಲು ತೂರಾಟ ನಡೆಸಿದ್ದಲ್ಲದೆ, ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ಕುರಿತಂತೆ ಬಸ್ ಚಾಲಕ ಸಚಿವರ ಪುತ್ರನ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಏತನ್ಮಧ್ಯೆ ಘಟನೆ ಕುರಿಂತೆ ಏನೇ ನಡೆದಿದ್ದರೂ ಕೂಡ ನಾನು ನನ್ನ ಮಗನನ್ನು ಬೆಂಬಲಿಸುವುದಿಲ್ಲ. ಪುತ್ರ ಓವರ್‌ಟೇಕ್ ಮಾಡುವ ಸಮಯದಲ್ಲಿ ಬಸ್ ಕಾರಿಗೆ ತಗಲಿರುವುದಾಗಿ ಚಾಲಕ ತನ್ನಲ್ಲಿ ತಿಳಿಸಿರುವುದಾಗಿ ಬೆಳಮಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗಷ್ಟೇ ಆಡಳಿತಾರೂಢ ಬಿಜೆಪಿ ಸರಕಾರದ ಸಚಿವ ಬಚ್ಚೇಗೌಡರು ತನ್ನ ಕಾರಿಗೆ ದಾರಿ ಬಿಡಲಿಲ್ಲ ಎಂದು ಆಕ್ರೋಶಗೊಂಡು ವ್ಯಕ್ತಿಯೊಬ್ಬರಿಗೆ ಹೊಡೆದು ಸಾಕಷ್ಟು ವಿವಾದ ನಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.