ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿದ್ಯಾಮನೋಹರ ಸ್ವಾಮೀಜಿ ಪೀಠ ತ್ಯಾಗಕ್ಕೆ ಭಕ್ತಾದಿಗಳ ಬಿಗುಪಟ್ಟು (Bangalore | Check Bounce | Hi-Court | Karnataka)
ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಸವನಗುಡಿಯ ಸೋಸಲೆ ವ್ಯಾಸರಾಜಮಠದ ವಿದ್ಯಾಮನೋಹರ ಸ್ವಾಮೀಜಿ ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದು ಮಠಕ್ಕೆ ವಾಪಸಾದ ಬೆನ್ನಲ್ಲೇ ಆಕ್ರೋಶ ಭರಿತರಾದ ಭಕ್ತಾದಿಗಳು ಪೀಠತ್ಯಾಗಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕಳಂಕ ತಂದ ಸ್ವಾಮೀಜಿ ಪೀಠದಲ್ಲಿ ಮುಂದುವರಿಯಬಾರದು ಎಂಬುದು ಭಕ್ತರ ಬೇಡಿಕೆಯಾಗಿತ್ತು. ಸ್ವಾಮೀಜಿ ಅವರಿಂದಾಗಿ ಮಠದಲ್ಲಿ ಪ್ರಥಮ ಬಾರಿಗೆ ಪೂಜೆ ನಿಂತು ಹೋಗಿದೆ. ಅಲ್ಲದೆ ಕ್ರಿಮಿನಲ್ ಕೇಸ್, ಚೆಕ್ ಬೌನ್ಸ್ ಸಹಿತ ಹಲವು ಕೇಸ್ ಸ್ವಾಮೀಜಿ ಮೇಲಿದೆ. ಕೋರ್ಟ್ ಆದೇಶದ ಮೇಲೆ ವಿಚಾರಣೆ ಕೂಡಾ ನಡೆಯುತ್ತಿದೆ. ಲೆಕ್ಕವಿಲ್ಲದಷ್ಟು ಆಸ್ತಿ ಪರವಾನಗಿ ಮಾಡುತ್ತಾ ಬಂದಿದ್ದಾರೆ. ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವ ಸ್ವಾಮೀಜಿ ಅವರನ್ನು ಮುಂದುವರಿಯಲು ಬಿಡುವುದಿಲ್ಲ ಎಂದು ಭಕ್ತರ ಬಿಗು ಪಟ್ಟು ಹಿಡಿದರು.

ಆದರೆ ಇವೆಲ್ಲಕ್ಕೂ ಜಗ್ಗದ ಮನೋಹರ ಸ್ವಾಮೀಜಿ ಯಾವುದೇ ಕಾರಣಕ್ಕೂ ಪೀಠ ತ್ಯಜಿಸೋದಿಲ್ಲ ಎಂದು ಸ್ಪಷ್ಟಪಡಿಸಿದರು. ಪೊಲೀಸ್ ಬಿಗು ಭದ್ರತೆಯಲ್ಲಿ ಆಗಮಿಸಿದ್ದ ಸ್ವಾಮೀಜಿ ನಮ್ಮ ಗುರುಗಳು ಕೊಟ್ಟಿರುವ ಸ್ಥಾನವನ್ನು ತ್ಯಜಿಸುವುದಿಲ್ಲ ಎಂದು ತಿಳಿಸಿದರು.
ಇವನ್ನೂ ಓದಿ