ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸದನದಲ್ಲಿ ಗಣಿ ಗದ್ದಲ; ಮಾರ್ಚ್ 31ಕ್ಕೆ ವರದಿ ಸಲ್ಲಿಕೆ (BJP | JDS | Congress | Report | Yeddyurappa | Vidhanasowdha)
ವಿಧಾನಸಭೆಯಲ್ಲಿ ನಡೆದ ಗಣಿ ಗದ್ದಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೇಮಕ ಮಾಡಲಾಗಿರುವ ಶ್ರೀಕಾಂತ್ ಕುಲಕರ್ಣಿ ನೇತೃತ್ವದ ಸದನ ಸಮಿತಿ ಮಾರ್ಚ್ 31ಕ್ಕೆ ವರದಿ ಸಲ್ಲಿಸಲಿದೆ.

ಮಂಗಳವಾರ ಕುಲಕರ್ಣಿ ನೇತೃತ್ವದ ಸದನ ಸಮಿತಿ ಸಭೆ ಸೇರಿತ್ತು. ಇಂದಿನ ಸಭೆಯ ಮುಂದೆ ಶಾಸಕರಾದ ಎ.ಮಂಜು, ದಿನೇಶ್ ಗುಂಡೂರಾವ್ ಹಾಜರಾಗಿ ತಮ್ಮ ಹೇಳಿಕೆ ನೀಡಿದರು.

2010 ಜುಲೈ 9ರಂದು ಸದನದಲ್ಲಿ ಗಣಿ ಗದ್ದಲದ ವಿಚಾರವಾಗಿ ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಭಾರೀ ಚಕಮಕಿ ನಡೆದು ಪರಸ್ಪರ ಕೈಕೈ ಮಿಸಲಾಯಿಸುವ ಪರಿಸ್ಥಿತಿ ವಿಧಾನಸಭೆಯಲ್ಲಿ ನಿರ್ಮಾಣವಾಗಿತ್ತು.

ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಿತಿ ಅಧ್ಯಕ್ಷ ಶ್ರೀಕಾಂತ್ ಕುಲಕರ್ಣಿ ಅವರು ಇಂದು ಸಮಿತಿ ಮುಂದೆ ಎ.ಮಂಜು ಮತ್ತು ದಿನೇಶ್ ಗುಂಡೂರಾವ್ ಹಾಜರಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮಿತಿ ಮುಂದೆ ಹಾಜರಾಗಿ ಹೇಳಿಕೆ ಕೊಟ್ಟಿಲ್ಲ. ಸ್ಪೀಕರ್ ಅವರಿಗೆ ಪತ್ರ ಮುಖೇನ ಹೇಳಿಕೆ ನೀಡಿದ್ದಾರೆ.
ಇವನ್ನೂ ಓದಿ