ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಾನಮತ್ತರಂತೆ ಸಿಎಂ ಆರೋಪ,ಯಾವ ತನಿಖೆಗೂ ಸಿದ್ದ: ಎಚ್‌ಡಿಕೆ (BJP | Yeddyurappa | Kumaraswamy | JDS | Deve gowda | CBI | Karnataka)
ಜೆಡಿಎಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಕೆಸರೆರಚಾಟ ಮುಂದುವರಿದಿದ್ದು, ಬೀದಿ ಬದಿಯಲ್ಲಿ ಕುಡುಕರು ಬಾಯಿಗೆ ಬಂದಂತೆ ಮಾತನಾಡುವಂತೆ ಸಿಎಂ ಕೂಡ ತಮ್ಮ ವಿರುದ್ಧ ಅನಾವಶ್ಯಕವಾಗಿ ಆರೋಪ ಹೊರಿಸುತ್ತಿದ್ದಾರೆ ಎಂದು ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ನನ್ನು ಸೇರಿದಂತೆ ಗೌಡರ ಕುಟುಂಬದ ಬಗ್ಗೆ ಸಿಬಿಐ ಅಥವಾ ಯಾವುದೇ ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿಯಿಂದ ತನಿಖೆ ನಡೆಸಿ ಎಂದು ನೇರ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅವರ ಬಂಧುಗಳ ಸಂಸ್ಥೆಗಳಾದ ರಾಜರಾಜೇಶ್ವರಿ ಎಂಟರ್‌ಪ್ರೈಸಸ್ ಮತ್ತು ಬಿಎಸ್‌ಕೆ ಎಂಟರ್‌ಪ್ರೈಸಸ್ ಖಾತೆಗಳಿಗೆ ಜಮೆಯಾಗಿರುವ 167 ಕೋಟಿ ರೂ.ಗಳ ಮೊತ್ತ ಕುಮಾರಸ್ವಾಮಿಯವರದೇ ಎಂಬ ಆಪಾದನೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವಂತೆ ರಾಜ್ಯದ ಬಿಜೆಪಿ ಸಂಸದರು ಗುರುವಾರ ಸಂಸತ್ ಭವನದ ಆವರಣದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಡಿಯೂರಪ್ಪ ಅವರು ದಾಖಲೆ ಇಲ್ಲದೆ ಆಪಾದನೆ ಮಾಡುತ್ತಿದ್ದಾರೆ. ಆದರೂ ತಾವು ಯಾವುದೇ ತನಿಖೆಗೂ ಸಿದ್ದ ಎಂದರು. ರಾಜ್ಯದಲ್ಲಿ ಇವರದೇ ಸರಕಾರವಿದೆ ವಾಣಿಜ್ಯ ತೆರಿಗೆ ಇಲಾಖೆ ಕೈಯಲ್ಲೇ ಇದೆ. ತನಿಖೆ ನಡೆಸಿ ತಪ್ಪಿದ್ದರೆ ನನ್ನ ವಿರುದ್ಧ ಕ್ರಮ ಜರುಗಿಸಬಾರದೇ? ತಾವು ಮಾಡುವ 167 ಕೋಟಿ ರೂ.ಗಳಿಗೆ ಯಾವುದೇ ದಾಖಲೆಯಿಲ್ಲದೆ ಬಾಯಿಬಡಿದುಕೊಂಡರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅದೇ ರೀತಿ 1985ರಲ್ಲಿ ನಲವತ್ತು ನಿವೇಶನಗಳನ್ನು ಪಡೆದಿರುವ ವಿಚಾರದ ಬಗ್ಗೆ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್, ಲೋಕಾಯುಕ್ತ ವಿಚಾರಣೆ ನಡೆದು ಈ ಆಪಾದನೆಗಳಿಗೆ ಆಧಾರವಿಲ್ಲ ಎಂಬ ತೀರ್ಪು ನೀಡಿತ್ತು. ಇವರು ಯಾವ ರೀತಿ ತನಿಖೆ ಬೇಕಾದರು ಮಾಡಿಕೊಳ್ಳಲಿ.ಆಗ ಆರೋಪ ಸಾಬೀತಾದರೆ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ತಿಳಿಸಿದರು.
ಇವನ್ನೂ ಓದಿ