ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇದೆಲ್ಲ ಬೇಡಣ್ಣ; ಕುಮಾರಣ್ಣನಿಗೆ ಫೋನ್ ಮಾಡಿದ್ದ ಯಡ್ಡಿ! (HD Kumaraswamy | BS Yeddyurappa | BJP | JDS)
ತನ್ನ ಮೇಲೆ ದಿನಕ್ಕೊಂದರಂತೆ ಬರುತ್ತಿರುವ ಹಗರಣ ಆರೋಪಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ರಾಜಿ ಸಂದಾನಕ್ಕೆ ಇಳಿದಿದ್ದರೇ? ಸ್ವತಃ ಮಾಜಿ ಮುಖ್ಯಮಂತ್ರಿಯೇ ಹೇಳಿಕೊಂಡಿರುವ ಪ್ರಕಾರ ಹೌದು.

ಇದು ನಡೆದಿರುವುದು ಪ್ರೇರಣಾ ಟ್ರಸ್ಟ್ ಹಗರಣ ದೆಹಲಿಯಲ್ಲಿ ಕುಮಾರಸ್ವಾಮಿಯಿಂದ ಬಯಲಾಗುವ ಮೊದಲು. ಆಗ ಕುಮಾರಸ್ವಾಮಿಯವರ ಸನಿಹಕ್ಕೆ ಬರಲು ಯತ್ನಿಸಿದ್ದ ಯಡಿಯೂರಪ್ಪ, ಹಗರಣ ಬಯಲು ಮಾಡದಂತೆ ರಾಜಿಗೆ ಮುಂದಾಗಿದ್ದರಂತೆ.

ಇದಕ್ಕೆ ಕುಮಾರಸ್ವಾಮಿಯವರು ಒಪ್ಪದೇ ಇದ್ದಾಗ, ಇನ್ನಿತರ ಮೂಲಗಳ ಮೂಲಕ ಮುಖ್ಯಮಂತ್ರಿಯವರು ಕಾರ್ಯ ಸಾಧಿಸಲು ಯತ್ನಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೊದಲು ನನ್ನ ಜತೆ ಸಂಧಾನಕ್ಕೆ ಯತ್ನಿಸಿದ್ದರು. ಇದಕ್ಕೆ ನಾನು ಒಪ್ಪದೇ ಇದ್ದಾಗ ನನ್ನ ಸಹಾಯಕರಿಗೆ ದೂರವಾಣಿ ಕರೆ ಮಾಡಿ ರಾಜಿ ಕುರಿತು ಮಾತನಾಡಿದ್ದರು. ಎಂ.ಸಿ. ನಾಣಯ್ಯ ಅವರಿಗೂ ಫೋನ್ ಮಾಡಿದ್ದರು. ಬೇಕಾದರೆ ಅವರನ್ನೇ ಕೇಳಿ ಎಂದು ಜೆಡಿಎಸ್ ನಾಯಕ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಆಪಾದಿಸಿದರು.

ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದ್ದುದರಿಂದ ನನ್ನ ಸಹಾಯಕರಿಗೆ ಕರೆ ಮಾಡಿ, ನನ್ನ ಜತೆ ಮಾತನಾಡಲು ಯತ್ನಿಸಿದ್ದರು. ಪ್ರೇರಣಾ ದೇಣಿಗೆ ವಿಚಾರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದು ಬೇಡ. ಇದನ್ನೆಲ್ಲ ನಾವು ಕುಳಿತು ಮಾತನಾಡಿ ಪರಿಹರಿಸೋಣ. ಏನಾದರೂ ವ್ಯತ್ಯಾಸಗಳಿದ್ದರೆ ಅದನ್ನು ಸರಿ ಮಾಡೋಣ ಎಂದು ಯಡಿಯೂರಪ್ಪ ನನ್ನ ಸಹಾಯಕರಲ್ಲಿ ಹೇಳಿದ್ದರು ಎಂದರು.

1032 ಕೋಟಿ ರೂಪಾಯಿಗಳ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಗುತ್ತಿಗೆ ಕೊಡಿಸಿದ್ದಕ್ಕೆ ಪ್ರತಿಯಾಗಿ, ಯಡಿಯೂರಪ್ಪ ಕುಟುಂಬದವರಿಂದ ನಡೆಸಲ್ಪಡುತ್ತಿರುವ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಮತ್ತು ಸಹ್ಯಾದ್ರಿ ಹೆಲ್ತ್‌ಕೇರ್ ಎಂಡ್ ಡಯಾಗ್ನಸ್ಟಿಕ್ಸ್ ಸಂಸ್ಥೆಗಳು ಮುರುಡೇಶ್ವರ ಪವರ್ ಕಾರ್ಪೊರೇಶನ್‌ನಿಂದ ಶೇರುಗಳ ರೂಪದಲ್ಲಿ ಲಾಭ ಪಡೆದಿವೆ ಎಂದು ಶನಿವಾರ ಆರೋಪಿಸಿದ ಸಂದರ್ಭದಲ್ಲಿ ಮೇಲಿನ ಮಾತುಗಳನ್ನು ಕೂಡ ಉಲ್ಲೇಖಿಸಿದ್ದರು.
ಇವನ್ನೂ ಓದಿ