ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮದರಸಾದ ಗುರುನಿಂದ ರೇಪ್; ವಿದ್ಯಾರ್ಥಿನಿ ಆತ್ಮಹತ್ಯೆ (Madarasa | koppa | Rape | Student suicide | Police | College)
ಮದರಸಾದ ಗುರು ಹಾಗೂ ಸ್ನೇತನಿಂದ ಅತ್ಯಾಚಾರಕ್ಕೆ ಒಳಗಾದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೊಂದು ಆತ್ಮಹತ್ಯೆಗೆ ಶರಣಾದ ಘಟನೆ ತಡವಾಗಿ ಬಯಲಾಗಿದೆ.

ಕೊಪ್ಪದ ಭಂಡಿಗಡಿಯ ಸರಳತೋಟದ ಚಂದ್ರಶೇಖರ ಎಂಬುವರ ಪುತ್ರಿ ಬಿ.ಸಿ.ಅಶ್ವಿನಿ (19) ಎಂಬಾಕೆ ಮೇಲೆ ಮದರಸಾದ ಗುರು ಸಲಾಂ ಸರ್ವರ್, ಮೀನು ವ್ಯಾಪಾರಿ ಅಬ್ದುಲ್ ರಜಾಕ್ ಅತ್ಯಾಚಾರ ನಡೆಸಿದ್ದರು. ಅಷ್ಟೇ ಅಲ್ಲ ಅತ್ಯಾಚಾರ ದೃಶ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಈ ವಿಷಯ ಬಹಿರಂಗ ಮಾಡಿದರೆ ಜಾಗ್ರತೆ ಎಂದು ಬೆದರಿಕೆ ಹಾಕಿದ್ದ. ಆ ನಿಟ್ಟಿನಲ್ಲಿ ಮಾನ ಹೋಗಬಹುದು ಎಂಬ ಹೆದರಿಕೆಯಿಂದ ಅಶ್ವಿನಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಫೆಬ್ರುವರಿ 28ರಂದು ಅಶ್ವಿನಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣ ಬಯಲಾದ ನಂತರ ಮಾ.17ರಂದು ದೂರು ದಾಖಲಿಸಿಕೊಂಡ ಹರಿಪರಪುರ ಠಾಣೆ ಪೊಲೀಸರು ಆರೋಪಿ ಗುಲಾಂ ಸರ್ವರ್, ಅಬ್ದುಲ್ ರಜಾಕ್ ಹಾಗೂ ಇವರಿಗೆ ಸಹಾಯ ನೀಡಿದ ಸಾಯಿನಾ ಎಂಬುವಳನ್ನು ಬಂಧಿಸಿದ್ದರು.

ಫೆಬ್ರುವರಿ 28ರಂದು ಅಶ್ವಿನಿ ತನ್ನ ತಂಗಿಯ ಬಳಿ ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ, ಗೆಳತಿ ಸಾಯಿನಾಳ ಜೊತೆ ತೆರಳಿದ್ದಳು. ಆದರೆ ಮರುದಿನ ಮನೆಗೆ ಬಂದವಳು ಮಾನಸಿಕವಾಗಿ ಖಿನ್ನಳಾಗಿದ್ದಳು. ಈ ಬಗ್ಗೆ ಸಹೋದರಿ ವಿಚಾರಿಸಿದಾಗ ನೆರೆಮನೆಯ ಸಾಹಿನಾ ತನ್ನನ್ನು ದೇವರಮನೆ ಅಬ್ದುಲ್ ರಜಾಕ್ ಬಳಿ ಕರೆದುಕೊಂಡು ಹೋಗಿದ್ದು ಅಲ್ಲಿ ಆತ ಮತ್ತು ಮದರಸಾದ ಗುರು ಸಲಾಂ ಸರ್ವರ್ ಎಂಬಾತ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಹೇಳಿಕೊಂಡಿದ್ದಳು. ಅಲ್ಲದೆ, ಇದರ ವೀಡಿಯೋ ಚಿತ್ರೀಕರಣ ನಡೆಸಿದ್ದು ಈ ಕುರಿತು ಯಾರಿಗಾದರು ವಿಷಯ ತಿಳಿಸಿದರೆ ವೀಡಿಯೋ ಬಹಿರಂಗ ಪಡಿಸುವ ಬೆದರಿಕೆ ಹಾಕಿದ್ದಾರೆಂದು ತಿಳಿಸಿದ್ದಳು. ಮಾನಸಿಕವಾಗಿ ನೊಂದ ಅಶ್ವಿನಿ ಮಾ.5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಏತನ್ಮಧ್ಯೆ ಅಕ್ಕನ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಚಿಕ್ಕಮಗಳು ಕೂಡ ಯಾರಿಗೂ ತಿಳಿಸಿರಲಿಲ್ಲವಾಗಿತ್ತು. ಆದರೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ನಂತರ ಚಿಕ್ಕಮಗಳ ಬಳಿ ವಿಚಾರಿಸಿದಾಗ ಕಾಮುಕ ಗುರುವಿನ ವಿಷಯ ಬಹಿರಂಗಗೊಂಡಿತ್ತು. ನಂತರ ಹರಿಹರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇವನ್ನೂ ಓದಿ