ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ಪರ್ಧೆಗೂ ಮುನ್ನ ಸೋಲೊಪ್ಪಿಕೊಂಡ ಎಚ್‌ಡಿಕೆ: ಬಿಜೆಪಿ (BJP | Channa pattana | By poll | JDS | Kumaraswamy | Congress)
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನವೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಲೊಪ್ಪಿಕೊಂಡು ಪರಾಜಿತರಾಗಿದ್ದಾರೆ ಎಂದು ಬಿಜೆಪಿ ಪಕ್ಷ ಟೀಕಿಸಿದೆ.

ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅನುಮತಿ ದೊರೆತಿಲ್ಲ ಎಂಬ ಕಾರಣ ನೀಡಿ, ಚುನಾವಣೆ ಕಣದಿಂದ ದೂರ ಸರಿದಿರುವುದು ನೋಡಿದರೆ ತಂದೆ, ಮಕ್ಕಳ ನಡುವೆ ಎಲ್ಲಾ ಸರಿಯಾಗಿಲ್ಲ ಎಂಬುದು ತಿಳಿದುಬರುತ್ತದೆ ಎಂದು ಪಕ್ಷದ ವಕ್ತಾರ ಎಸ್.ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ಕುಟುಂಬದಲ್ಲೇ ಕಲಹವಿಟ್ಟುಕೊಂಡು ಬಿಜೆಪಿ ಸರಕಾರದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತ, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಚುನಾಯಿತ ಸರಕಾರವನ್ನು ಪೂರ್ಣಾವಧಿ ಪೂರೈಸಲು ಅಡ್ಡಿಪಡಿಸುತ್ತಿರುವ ನಕರಾತ್ಮಕ ಚಟುವಟಿಕೆಯಲ್ಲಿ ತೊಡಗಿರುವ ಜೆಡಿಎಸ್ ಅನ್ನು ರಾಜ್ಯದ ಜನತೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಇವನ್ನೂ ಓದಿ