ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಿನಿ ಸಮರ-58 ನಾಮಪತ್ರ; ಸಿಂ.ಲಿಂ. ಆಸ್ತಿ 11.50 ಲಕ್ಷ (Channa pattana | JDS | Congress | BJP | Kumaraswamy | Election)
ತೀವ್ರ ಕುತೂಹಲ ಹುಟ್ಟು ಹಾಕಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಅಂತಿಮ ದಿನವಾಗಿದ್ದು, ಒಟ್ಟು 58 ನಾಮಪತ್ರಗಳು ಸಲ್ಲಿಕೆಯಾಗಿವೆ.

ಭಾರಿ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ 20 ಮಂದಿ ನಾಮಪತ್ರ ಸಲ್ಲಿಸಿದ್ದರೆ, ಜಗಳೂರು ಕ್ಷೇತ್ರದಲ್ಲಿ 17 ಹಾಗೂ ಬಂಗಾರಪೇಟೆ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಇಂದು (ಗುರುವಾರ) ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಮಾ.26 ಕೊನೆಯ ದಿನ. ಜಗಳೂರಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಆ ಪಕ್ಷಕ್ಕೆ ಸಮಸ್ಯೆಯಾಗಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ರಘುನಂದನ್ ರಾಮಣ್ಣ, ಜೆಡಿಎಸ್‌ನ ಸಿ.ಲಿಂ.ನಾಗರಾಜು, ಬಿಜೆಪಿಯ ಸಿ.ಪಿ.ಯೋಗೀಶ್ವರ್, ಕನ್ನಡಾಂಬೆ ರಾಮಮೂರ್ತಿ ಗೌಡ, ಶಂಭೂಲಿಂಗೇಗೌಡ, ಜೆ.ಟಿ.ಪ್ರಕಾಶ್, ಎಸ್.ಆರ್.ಜೈಕಿಶಾನ್, ಅಡ್ವೋಕೇಟ್ ಮೌಲ್ವಿ ಜಮೀರ್ ಉದ್ದೀನ್, ಸುಂಗರರಾಜೇ ಅರಸ್, ಅಶ್ರಫ್, ಎಂ.ಬೋರೇಗೌಡ, ಸೈಯದ್ ಜುಲ್ಫಿಕರ್ ಮೆಹದಿ, ಎಸ್.ಸಿದ್ದರಾಮಯ್ಯ, ಡಾ.ವೆಂಕಟೇಗೌಡ, ಬಿ.ಎಂ.ಮಂಚೇಗೌಡ, ಸೈಯದ್ ಜಕ್ರೀಯಾ, ಮುಕ್ತಾರ್ ಫಾತಿಮಾ, ಕೆಂಪಸಿದ್ದೇಗೌಡ, ಎಸ್.ಪಿ.ಶಿವರಾಜು, ಸೈಯದ್ ಫಕ್ರುಲ್ಲಾ ಖಾದ್ರಿ, ಬಿ.ಎಸ್.ಪ್ರಸಾದ್(ಪಕ್ಷೇತರರು).

ಬಂಗಾರಪೇಟೆ ಕ್ಷೇತ್ರದಲ್ಲಿ ಕೊನೆಯ ದಿನ ಎಂಟು ಮಂದಿ ಸೇರಿ ಒಟ್ಟು 21 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಕೆ.ಎಂ.ನಾರಾಯಣಸ್ವಾಮಿ, ಬಿಜೆಪಿಯ ಎಂ.ನಾರಾಯಣಸ್ವಾಮಿ, ಜೆಡಿಎಸ್‌ನ ಸಿ.ವೆಂಕಟೇಶಪ್ಪ, ಜೆಡಿಯುನ ರವಿಕುಮಾರ್ ಹಾಗೂ ಜೆಡಿಯು ಬಿ ಫಾರಂ ಇಲ್ಲದೆ ರಾಮಚಂದ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಪಕ್ಷೇತರರಾಗಿ ಶ್ರೀನಿವಾಸ್, ಜಯರಾಮಪ್ಪ, ರಂಗಸ್ವಾಮಿ, ಕೃಷ್ಣಮೂರ್ತಿ, ಟಿ.ಎಸ್.ಕೃಷ್ಣಮೂರ್ತಿ, ಸಿ.ಮೋಹನ್, ಕೇಶವಮೂರ್ತಿ, ಸಿ.ಬಿ.ಕೆ.ರಾಮ ಹಾಗೂ ಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ.

ಜಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ.ರಾಮಚಂದ್ರಪ್ಪ, ಕಾಂಗ್ರೆಸ್‌ನ ದೇವೇಂದ್ರಪ್ಪ, ಜೆಡಿಎಸ್‌ನ ಹುಚ್ಚವ್ವನಹಳ್ಳಿ ಮಂಜುನಾಥ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಚ್.ಪಿ.ರಾಜೇಶ್ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು.

ಎತ್ತಿನ ಬಂಡಿಯಲ್ಲಿ ಆಗಮಿಸಿದ ಸಿಂ.ಲಿಂ:
ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಅವರು ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರ ಜೊತೆ ಎತ್ತಿನ ಬಂಡಿಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ವತಃ ಚಾವಟಿ ಹಿಡಿದು ಸಾರಥಿಯಾಗಿ ಬಂಡಿಯನ್ನು ಸಾಗಿಸಿಕೊಂಡು ಬಂದಿದ್ದರು.

ಸಿಂ.ಲಿಂ.ನಾಗರಾಜು ಆಸ್ತಿ 11.50 ಲಕ್ಷ ರೂ.:
ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿಯಾಗಿರುವ ಸಿಂ.ಲಿಂ.ನಾಗರಾಡು ಅವರು 12.50 ಲಕ್ಷ ರೂಪಾಯಿ ಸ್ಥಿರ ಮತ್ತು ಚರ ಆಸ್ತಿಯ ಒಡೆಯರಾಗಿದ್ದಾರೆ. ಬುಧವಾರ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ ಅವರು, ಜತೆಯಲ್ಲಿ ತಮ್ಮ ಆಸ್ತಿ ಮಾಹಿತಿ ಘೋಷಿಸಿದ್ದಾರೆ. ಸಿಂಗರಾಜಪುರದಲ್ಲಿ 2,100 ಚದರ ಅಡಿ ವಿಸ್ತೀರ್ಣದಲ್ಲಿ ಸೀಟಿನ ಮನೆ (ಮೂರು ಲಕ್ಷ), ಮತ್ತು 3.20 ಎಕರೆ ಕೃಷಿ ಭೂಮಿ (8 ಲಕ್ಷ) ಹೊಂದಿದ್ದಾರೆ. 50 ಸಾವಿರ ರೂ.ನಗದು ಹೊಂದಿರುವ ಅವರು ಚನ್ನಪಟ್ಟಣ ಬಿಡಿಸಿಸಿ ಬ್ಯಾಂಕ್ ಖಾತೆಯಲ್ಲಿ 500 ರೂಪಾಯಿ ಠೇವಣಿ ಇದೆ.
ಇವನ್ನೂ ಓದಿ