ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಿನ್ನಮತ ಸರಿಯಲ್ಲ, ಯಡಿಯೂರಪ್ಪ ನಮ್ಮ ನಾಯಕ: ಶೋಭಾ (Shobha karandlaje | BJP | Yeddyurappa | Ishwarappa | By poll | Congress)
PR
'ಉಪ ಚುನಾವಣೆ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ಎತ್ತಿದ್ದು ಸರಿಯಲ್ಲ' ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಪ ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಬೇಕಿರಲಿಲ್ಲ. ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರು. ಹಾಗಾಗಿ ಪದೇ, ಪದೇ ಈ ರೀತಿ ಭಿನ್ನಮತ ಉದ್ಭವಿಸುವುದು ಪಕ್ಷಕ್ಕೆ ಕೆಟ್ಟ ಹೆಸರು ತರಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಈಶ್ವರಪ್ಪ, ಅನಂತ್ ಕುಮಾರ್ ಸೇರಿದಂತೆ ಭಿನ್ನಮತೀಯರ ವಿರುದ್ಧ ಕಿಡಿಕಾರಿದರು.

ನವದೆಹಲಿಗೆ ತೆರಳಿದ್ದ ನಾಯಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೋಭಾ, ಮುಂದಿನ ಎರಡು ವರ್ಷಗಳವರೆಗೆ ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ ಜಗಳೂರು, ಬಂಗಾರಪೇಟೆ ಹಾಗೂ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲ್ಲುವುದೇ ಬಿಜೆಪಿಯ ಗುರಿ. ಚುನಾವಣೆ ಎದುರಿಸುವುದು ನಮಗೆ ಯುದ್ಧದ ಹಾಗೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಆಡಳಿತಾರೂಢ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ ತಿಪ್ಪೆ ಸಾರುತ್ತಿದ್ದರೆ, ಮತ್ತೊಂದೆಡೆ ಸ್ವತಃ ಸಚಿವೆ ಶೋಭಾ ಕರಂದ್ಲಾಜೆಯೇ ಭಿನ್ನಮತೀಯ ನಾಯಕರು ದೆಹಲಿಗೆ ತೆರಳಿದ್ದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಬಿಕ್ಕಟ್ಟಿನ ಗುಟ್ಟನ್ನು ಹೊರಹಾಕಿದಂತಾಗಿದೆ.
ಇವನ್ನೂ ಓದಿ