ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟಾಚಾರ-ಈಜಿಪ್ಟ್‌ನಂತೆ ಜನ ದಂಗೆ ಏಳ್ತಾರೆ: ಲೋಕಾಯುಕ್ತ (Lokayuktha | Egypt | Bharain | Santhosh hegde | Yeddyurappa | Karnataka)
'ರಾಜ್ಯದಲ್ಲಿ ಇದೇ ರೀತಿ ಭ್ರಷ್ಟಾಚಾರ ಮುಂದುವರಿದರೆ ಈಜಿಪ್ಟ್, ಬಹರೈನ್‌ನಂತೆ ಜನ ದಂಗೆ ಏಳುತ್ತಾರೆ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ಭಾರತೀಯ ವಿದ್ಯಾಭವನ ಕೇಂದ್ರದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ವಿರೋಧಿ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿನ ಭ್ರಷ್ಟರನ್ನು ಗೌರವಿಸಬೇಡಿ, ಅಂತಹವರನ್ನು ಸಾರ್ವಜನಿಕವಾಗಿಯೇ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಹಿಂದಿನ ಸರಕಾರಗಳಿಂತ ಹೆಚ್ಚಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮತದಾರರೇ ಭ್ರಷ್ಟರಾದರೆ ಭ್ರಷ್ಟಾಚಾರ ತೊಲಗಿಸಲು ಸಾಧ್ಯವಿಲ್ಲ. ಹಾಗಾಗಿ ಮೊದಲು ನಾವು ಹಣ ಪಡೆದು ಮತ ನೀಡುವ ಕೆಟ್ಟ ಚಾಳಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಎಲ್ಲಾ ಸರಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿವೆ, ಅದರಲ್ಲೂ ರಾಜ್ಯದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ಅತಿಯಾಗಿದೆ. ಆ ನಿಟ್ಟಿನಲ್ಲಿ ಇದೇ ರೀತಿ ಭ್ರಷ್ಟಾಚಾರ ಮುಂದುವರಿದರೆ ರಾಜ್ಯದ ಜನರು ಕೂಡ ಈಜಿಪ್ಟ್, ಬಹರೈನ್‌ನಂತೆ ದಂಗೆ ಏಳುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು. ಅಷ್ಟೇ ಅಲ್ಲ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ತಾನು ಯಾವಾಗಲೂ ಸಿದ್ದ ಎಂದು ಹೇಳಿದರು.

ಕ್ರಾಂತಿ ನಡೆದು ಕುರ್ಚಿಯಿಂದ ಕೆಳಗಿಳಿಸಿ ಮತ್ತೆ ಕುರ್ಚಿಗೆ ಬರುವವರು ಮತ್ತಷ್ಟು ಭ್ರಷ್ಟರಾದರೆ ಏನು ಮಾಡುವುದು. ಪ್ರತಿ ಸರಕಾರ ಹಿಂದಿನ ಸರಕಾರಗಳಿಗಿಂತ ಹೆಚ್ಚು ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಈ ಸರಕಾರವೂ ಅದೇ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ಭ್ರಷ್ಟಾಚಾರದ ವಿರುದ್ಧ ಕ್ರಾಂತಿ ಮಾಡುವ ಬದಲು ಚಳವಳಿ ರೂಪಿಸಬೇಕು ಎಂದರು.
ಇವನ್ನೂ ಓದಿ