ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕೀಯ ಮಾಡ್ಲಿಕ್ಕೆ ಕೆಲವು ಪತ್ರಕರ್ತರು ಹುಟ್ಟಿದ್ದಾರೆ:ಈಶ್ವರಪ್ಪ (Ishwarappa | BJP | Yeddyurappa | Congress | Land scam | Hubballi)
'ಏನ್ ದೆಹಲಿಗೆ ಹೋಗ್ಬಾರ್ದಾ, ದೆಹಲಿಗೆ ಹೋದ ಕೂಡಲೇ ಭಿನ್ನಮತ ಇದೆ ಅಂತಾನಾ? ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ನಿಮಗೆ ಕನ್ನಡ ಬರುತ್ತೆ ಅಲ್ವಾ'...ಹೀಗೆ ಪತ್ರಕರ್ತರ ವಿರುದ್ಧವೇ ಕಿಡಿಕಾರಿದವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ.

ಶನಿವಾರ ಹಾವೇರಿಗೆ ತೆರಳುವ ಮಾರ್ಗದಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು, ದೆಹಲಿ ಭೇಟಿ ಮತ್ತು ನಾಯಕತ್ವ ಬದಲಾವಣೆ ಕುರಿತು ಊಹಾಪೋಹದ ಕುರಿತು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದ ರೀತಿ ಇದು.

ನಾವು ದೆಹಲಿಗೆ ಹೋಗಿದ್ದು ನಾಯಕತ್ವ ಬದಲಾಯಿಸಲು ಅಲ್ಲ. ಪಕ್ಷದ ಶಾಸಕರಿಗೆ ಅಸಮಾಧಾನವಿತ್ತು. ನಮ್ಮ ಪಕ್ಷ ಒಂದು ಕುಟುಂಬವಿದ್ದಂತೆ. ಅದಕ್ಕಾಗಿಯೇ ಅಸಮಾಧಾನ ಬಗೆಹರಿಸಲು ದೆಹಲಿಯ ವರಿಷ್ಠರ ಬಳಿ ಹೋಗಿದ್ದೇವು ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದರು.

ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆ ಕೇಳಿದಾಗ ಸಿಡಿಮಿಡಿಗೊಂಡ ಈಶ್ವರಪ್ಪ, ಎಲ್ಲಿ ಹೋದ್ರೂ ಇದೇ ಪ್ರಶ್ನೆ ಕೇಳ್ತೀರಿ, ಈ ಗೊಂದಲ ಹೇಗೆ ಬಂತು, ಎಲ್ಲಿಂದ ಬಂತು ಎಂದು ಖಾರವಾಗಿ ಪ್ರಶ್ನಿಸಿದರು.

ಅನಾವಶ್ಯಕವಾಗಿ ಊಹಾಪೋಹ ಸೃಷ್ಟಿ ಮಾಡಿಕೊಂಡು ಬಂದು ನಮ್ಮಲ್ಲಿ ಪ್ರಶ್ನೆ ಕೇಳಿದ್ರೆ ಹೇಗೆ? ಕೆಲವು ಪತ್ರಕರ್ತರು ರಾಜಕೀಯ ಮಾಡ್ಲಿಕ್ಕಾಗಿಯೇ ಹುಟ್ಟಿದ್ದಾರೆ ಎಂದು ಕಿಡಿಕಾರಿದ ಅವರು, ಯಡಿಯೂರಪ್ಪ ಅವರೇ ನಮ್ಮ ನಾಯಕರು. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿ ಜಾಗ ಖಾಲಿಮಾಡಿದರು!
ಇವನ್ನೂ ಓದಿ