ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 550 ಎಕರೆಗೆ ಶಿಫಾರಸು; ಎಚ್‌ಡಿಕೆಗೆ ಸುಪ್ರೀಂ ತಪರಾಕಿ (Supreme court | kumaraswamy | JDS | BJP | Mining | Yeddyurappa)
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತಿಮ್ಮನ ಗುಡಿ ವಲಯದ 550 ಎಕರೆ ಪ್ರದೇಶದಲ್ಲಿ ಅದಿರು ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಸರ್ವೋಚ್ಚನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ತುರ್ತು ನೋಟಿಸ್ ಜಾರಿ ಮಾಡಿದೆ.

2007 ಅಕ್ಟೋಬರ್ 6ರಂದು ಸಂಡೂರು ತಾಲೂಕಿನ ಜೋಗ, ತಿಮ್ಮನಗುಡಿ, ಭವಿಹಳ್ಳಿ, ಎನ್ಇಬಿ ರೇಂಜ್‌ನ 550 ಎಕರೆ ಪ್ರದೇಶದಲ್ಲಿ ಅದಿರುವ ಗಣಿಗಾರಿಕೆ ನಡೆಸಲು ತರಾತುರಿಯಲ್ಲಿ ಅನುಮತಿ ನೀಡಿರುವುದು ತೀವ್ರ ಶಂಕೆಗೆ ಎಡೆಮಾಡಿದ್ದು, ಇಂತಹ ನಿರ್ಧಾರ ಕೈಗೊಂಡಿರುವುದಕ್ಕೆ ವಿವರಣೆ ನೀಡುವಂತೆ ನ್ಯಾ.ರವೀಂದ್ರನ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಎಚ್‌ಡಿಕೆಗೆ ನೋಟಿಸ್ ನೀಡಿದೆ.

ವಾಸ್ತವವಾಗಿ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಮಂಜೂರಾಗಿದ್ದ ಗುತ್ತಿಗೆಯನ್ನು ವಿನೋದ್ ಗೋಯೆಲ್ ಎಂಬ ಉದ್ಯಮಿಗೆ ವರ್ಗಾಯಿಸಿ 2007ರ ಅ.6ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಆದೇಶ ಹೊರಡಿಸಿದೆ. ಇಂತಹ ಆದೇಶದ ಹಿಂದೆ ಕುಮಾರಸ್ವಾಮಿ ಒತ್ತಡವಿದೆ ಎಂದು ಅಧಿಕಾರಿಗಳೇ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದರು.

2007ರ ಅ.6ರಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಕಚೇರಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರವೊಂದು ರವಾನೆಯಾಗಿತ್ತು. ಅದರಲ್ಲಿ 2 ಗಂಟೆಯೊಳಗೆ 550 ಎಕರೆ ಗಣಿ ಗುತ್ತಿಗೆ ಆದೇಶ ಹೊರಬೀಳಬೇಕೆಂದು ತಾಕೀತು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಮತ್ತು ವಿನೋದ್ ಗೋಯೆಲ್ ಇಬ್ಬರ ಹೆಸರನ್ನು ನಮೂದಿಸಿ ಆದೇಶ ಹೊರಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದರು.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ವಿವರಣೆ ನೀಡುವಂತೆ ಕುಮಾರಸ್ವಾಮಿಗೆ ನೋಟಿಸ್ ಜಾರಿ ಮಾಡಿದೆ. ಕುಮಾರಸ್ವಾಮಿ ಸರಕಾರದ ಗದ್ದುಗೆಯಿಂದ ಇಳಿಯುವ ಮುನ್ನ ಕೈಗೊಂಡ ಈ ನಿರ್ಧಾರದ ಹಿಂದೆ ಭಾರೀ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ.
ಇವನ್ನೂ ಓದಿ