ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 100ನೇ ಶತಕ; ಸಚಿನ್ ಅಭಿಮಾನಿ ನೇಣಿಗೆ ಶರಣು (Sachin fan hangs | World Cup | MANDYA | Sujay hanged)
ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಾಟದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶತಕಗಳ ಶತಕ ಹೊಡೆಯುವಲ್ಲಿ ವಿಫಲವಾಗಿದ್ದನ್ನು ಸಹಿಸಲಾರದ ಕಟ್ಟಾ ಅಭಿಮಾನಿಯೊಬ್ಬ ನೇಣಿಗೆ ಶರಣಾದ ಘಟನೆ ಪಾಂಡವಪುರದಲ್ಲಿ ಭಾನುವಾರ ನಡೆದಿದೆ.

ಟೀಮ್ ಇಂಡಿಯಾದ ಸಿಡಿಲ ಮರಿ ಸಚಿನ್ ತೆಂಡೂಲ್ಕರ್ ನೂರನೇ ಶತಕ ಹೊಡೆಯುವಲ್ಲಿ ವಿಫಲವಾಗಿದ್ದನ್ನು ಕಂಡ ಸುಜಯ್ ಎಂಬ ಯುವಕ ಮನೆಯಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ.

ಭಾರತ ಮತ್ತು ಶ್ರೀಲಂಕಾ ತಂಡದ ನಡುವಿನ ಪಂದ್ಯದಲ್ಲಿ ತೆಂಡೂಲ್ಕರ್ ಶತಕಗಳ ಶತಕ ಬಾರಿಸದೆ ಶೀಘ್ರದಲ್ಲೇ ಪೆವಿಲಿಯನ್‌ಗೆ ಮರಳಿದ್ದನ್ನು ಕಂಡ ಸುಜಯ್ ಆಘಾತಕ್ಕೊಳಗಾಗಿರುವುದಾಗಿ ಆತನ ಪೋಷಕರು ಮತ್ತು ಗೆಳೆಯರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಈತ ಸಚಿನ್‌ನ ದೊಡ್ಡ ಅಭಿಮಾನಿಯಂತೆ. ಹಾಗಾಗಿ ಸಚಿನ್ ಶತಕಗಳ ಶತಕ ಬಾರಿಸುವ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದನಂತೆ. ಆದರೆ ಆ ಆಸೆ ಈಡೇರಿಲ್ಲ ಎಂದು ತೀವ್ರ ಮನನೊಂದು ನೇಣಿಗೆ ಶರಣಾಗಿರುವುದಾಗಿ ಆತನ ತಂದೆ ಭಾಸ್ಕರ ವಿವರಿಸಿದ್ದಾರೆ.

ಶನಿವಾರ ನಡೆದ ಪಂದ್ಯವನ್ನು ಸುಜಯ್ ತನ್ನ ಮನೆಯಲ್ಲಿ ಗೆಳೆಯ ಜೊತೆ ಕೊನೆಯವರೆಗೂ ವೀಕ್ಷಿಸಿದ್ದನಂತೆ. ಭಾರತ ಗೆಲುವು ಸಾಧಿಸಿದಾಗಲೂ ಆತ ಆ ಸಂಭ್ರಮದಲ್ಲಿ ಭಾಗಿಯಾಗಿದ್ದನಂತೆ. ಆದರೆ ಯಾರ ಬಳಿಯೂ ಸಚಿನ್‌ ಶತಕಗಳ ಶತಕ ಬಾರಿಸದಿದ್ದ ಬಗ್ಗೆ ಏನನ್ನೂ ಹೇಳಿಲ್ಲವಾಗಿತ್ತಂತೆ. ಆದರೆ ಆ ಸಂದರ್ಭದಲ್ಲಿ ಸುಜಯ್ ತುಂಬಾ ಆಘಾತಕ್ಕೊಳಗಾಗಿದ್ದನಂತೆ. ಹಾಗಂತ ಆತ ತನ್ನ ಜೀವವನ್ನೇ ಕೊನೆಗೊಳಿಸಿಕೊಳ್ಳುತ್ತಾನೆಂಬ ಕಲ್ಪನೆ ತಮಗಿರಲಿಲ್ಲವಾಗಿತ್ತು ಎಂದು ತಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಆತನ ಪಾಲಿಗೆ ದೇವರಾಗಿದ್ದ ಎಂದು ಸುಜಯ್ ಗೆಳೆಯ ಮಣಿ ಅಭಿಪ್ರಾಯವ್ಯಕ್ತಪಡಿಸಿದ್ದಾನೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಚಿನ್ ಶತಕಗಳ ಶತಕ ಬಾರಿಸುವುದು ಖಚಿತ ಎಂದು ತನ್ನ ಗೆಳೆಯರಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದನಂತೆ. ವಿಧಿ ವಿಪರ್ಯಾಸ ಮೈಸೂರಿನ ಬಾನುಮಯ್ಯ ಕಾಲೇಜಿನ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿದ್ದ ಸುಜಯ್ ಭಾನುವಾರ ಬೆಳಿಗ್ಗೆ ನೇಣಿಗೆ ಶರಣಾಗಿರುವುದು ಮನೆಯವರಿಗೆ ಮತ್ತು ಗೆಳೆಯರಿಗೆ ದೊಡ್ಡ ಆಘಾತ ತಂದೊಡ್ಡಿದೆ.
ಇವನ್ನೂ ಓದಿ